

ಬಾಲಿವುಡ್ ನಟ ಸಲ್ಮಾನ್ ಖಾನ್ ವೃತ್ತಿ ಜೀವನದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಲಿದೆ. ಅದೇನೆಂದರೆ, ಚಿತ್ರರಂಗಕ್ಕೆ ಆಗಮಿಸಿ ಮೂರು ದಶಕಗಳೇ ಕಳೆದರೂ, ಇಲ್ಲಿಯವರೆಗೂ ಬಯೋಪಿಕ್ನಲ್ಲಿ ಸಲ್ಮಾನ್ ನಟಿಸಿರಲಿಲ್ಲ. ಇದೀಗ ಆ ಗಳಿಗೆಯೂ ಸನ್ನಿಹಿತವಾಗಿದೆ.
ತೆರೆಮೇಲೆ ಗೂಢಚಾರಿಯಾಗಿ ಖದರ್ ತೋರಿಸಲಿದ್ದಾರವರು. ಹೌದು, "ಬ್ಲಾಕ್ ಟೈಗರ್' ಎಂದೇ ಜನಪ್ರಿಯರಾಗಿರುವ ಭಾರತೀಯ ಗೂಢಚಾರಿ ರವೀಂದ್ರ ಕೌಶಿಕ್ ಅವರ ಜೀವನದ ಒಂದಷ್ಟು ಭಾಗವನ್ನು ಸಿನಿಮಾ ಮಾಡಲು ನಿರ್ದೇಶಕ ರಾಜಕುಮಾರ್ ಗುಪ್ತಾ ತಯಾರಿ ನಡೆಸಿದ್ದಾರೆ. ಕಳೆದ 5 ವರ್ಷಗಳಿಂದ ರವೀಂದ್ರ ಅವರ ವೃತ್ತಿ ಜೀವನದ ಸವಾಲುಗಳನ್ನು ಕಥೆ ಮಾಡಿಕೊಂಡಿರುವ ಗುಪ್ತ, ಇದೀಗ ಚಿತ್ರಕಥೆಯನ್ನೂ ಸಿದ್ಧಪಡಿಸಿದ್ದಾರೆ.