ಕರ್ನಾಟಕದ ನಟಿಯೊಂದಿಗೆ ಸಲ್ಮಾನ್ ಖಾನ್ ಡೇಟಿಂಗ್? ವೈರಲ್ ಆಗುತ್ತಿವೆ ಇವರಿಬ್ಬರ ಫೋಟೋಗಳು!

#PoojaHegde #SalmanKhan #Dating #ViralPhoto #Bollywood
Published on

ನವದೆಹಲಿ: ಬಾಲಿವುಡ್ ನಟ ಸಲ್ಮಾನ್​ ಖಾನ್ ಸದ್ಯದಲ್ಲೇ ಮದುವೆಯಾಗ್ತಾರಾ? ಬಹುಭಾಷಾ ನಟಿಯನ್ನು ವರಿಸ್ತಾರ ಎಂಬ ಮಾತುಗಳು ಇದೀಗ ಸಿನಿ ಅಂಗಳದಲ್ಲಿ ಸಖತ್ ಸದ್ದು ಮಾಡುತ್ತಿವೆ. ಕರ್ನಾಟಕ ಮೂಲದ ನಟಿಯೊಂದಿಗೆ ಸಲ್ಮಾನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜೋರಾದ ಚರ್ಚೆಗಳು ನಡೆಯುತ್ತಿವೆ.

ಸಲ್ಮಾನ್ ಖಾನ್ ಬಹುಭಾಷಾ ನಟಿ ಪೂಜಾ ಹೆಗ್ಡೆ ಜತೆಗೆ ಡೇಟಿಂಗ್​ ಮಾಡುತ್ತಿದ್ದಾರೆ. ಇಬ್ಬರೂ ಒಟ್ಟಾಗಿ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಉಮೈರ್ ಸಂಧು ಟ್ವೀಟ್ ಮಾಡಿದ್ದು, ಸಿನಿ ಜೋಡಿಗಳಾದ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಸಲ್ಮಾನ್ ಖಾನ್ ನಿರ್ಮಾಣ ಸಂಸ್ಥೆಯ ಹೊಸ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ಸದ್ಯ ಒಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಇದು ಸಲ್ಮಾನ್ ಖಾನ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ ಎಂದು ಉಮೈರ್ ಸಂಧು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net