

ಬೆಂಗಳೂರು: ದುನಿಯಾ ವಿಜಯ್ ನಿರ್ದೇಶನ ಮಾಡಿ ನಟಸುತ್ತಿರುವ ‘ಸಲಗ’ ಸಿನಿಮಾದ ಟೈಟಲ್ ಟ್ರಾ್ಯಕ್ ಚಿತ್ರೀಕರಣ ಬೆಂಗಳೂರಿನ ಚಾಮರಾಜಪೇಟೆಯ ಸ್ಮಶಾನದಲ್ಲಿ ನಡೆದಿದೆ. ದುನಿಯಾ ವಿಜಯ್ ನಟನೆಯ ಸಿನಿಮಾಗಳಲ್ಲಿ ಸ್ಮಶಾನದ ಶಾಟ್ ಇದ್ದೇ ಇರುತ್ತದೆ. ಅದು ಸಲಗದಲ್ಲಿಯೂ ಮುಂದುವರೆದಿದೆ.
‘ನನ್ನ ಸಿನಿಮಾದಲ್ಲಿ ಇಮ್ಯಾಜಿನೇಶನ್ಗಿಂತಲೂ ವಾಸ್ತವತೆ ಇರುತ್ತದೆ. ಮನುಷ್ಯ ವಾಸ್ತವತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ನೆಮ್ಮದಿಯಾಗಿ ಇರಲು ಸಾಧ್ಯ. ಹಾಗಾಗಿ ಸ್ಮಶಾನದ ಸೀನ್ಗಳು ಇರುತ್ತವೆ. ಸಲಗದಲ್ಲಿ ಟೈಟಲ್ ಟ್ರಾ್ಯಕ್ಗಾಗಿ ಸ್ಮಶಾನಕ್ಕೆ ಬಂದಿದ್ದೇವೆ. ‘ಸಾವು ನಿನ್ನ ಪಕ್ಕದಲ್ಲಿಯೇ ಮಲಗಿರುತ್ತದೆ’ಎಂಬ ಪದ ಈ ಹಾಡಿನಲ್ಲಿದೆ. ಇದು ನನಗೆ ಬಹಳ ಇಷ್ಟವಾಯಿತು.
ಜನ ವಾಸ್ತವವನ್ನು ಹೆಚ್ಚು ಹೇಳಿದಾಗ ಸಿನಿಮಾದೊಂದಿಗೆ ಕನೆಕ್ಟ್ ಆಗುತ್ತಾರೆ.’ಎನ್ನುತ್ತಾರೆ ವಿಜಯ್. ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ವಿಜಯ್ ಕೊನೆಯ ಕ್ಷಣದ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಚಿತ್ರ ಇದೇ ತಿಂಗಳ ಕೊನೆ ಅಥವಾ ಮಾರ್ಚ್ ತಿಂಗಳ ಆರಂಭದಲ್ಲಿ ರಿಲೀಸ್ ಆಗುತ್ತದೆ. ಕೆ ಪಿ ಶ್ರೀಕಾಂತ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ ಖಡಕ್ ಪೊಲೀಸ್ ಆಫೀಸರ್ ಆಗಿ ಕೆಲಸ ಮಾಡಿದ್ದಾರೆ. ಚರಣ್ರಾಜ್ ಸಂಗೀತ, ಟಗರು ಮಾಸ್ತಿ ಡೈಲಾಗ್, ಶಿವು ಸೇನಾ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದೆ.
ಹೆಣಗಳ ಮಧ್ಯೆ, ಸ್ಮಶಾನದಲ್ಲಿ ಹೆಚ್ಚು ಚಿತ್ರೀಕರಣ ಮಾಡುತ್ತೀರಲ್ಲ ಭಯ ಆಗುವುದಿಲ್ಲವಾ ಎಂದು ಜನ ಕೇಳುತ್ತಾರೆ, ಆದರೆ ನನಗೆ ಸಾವು ವಾಸ್ತವ ಎಂಬುದು ಅರ್ಥವಾಗಿದೆ. ಹಾಗಾಗಿ ಏನೂ ಅನಿಸುವುದಿಲ್ಲ. ಇನ್ನು ನಾವು ಎಷ್ಟೇ ಬೆಳೆದಿದ್ದೇವೆ, ದೊಡ್ಡ ಇನ್ಫ್ಲುಯೆನ್ಸ್ ಇದೆ ಎಂದುಕೊಂಡರೆ ಅದೆಲ್ಲ ತಪು್ಪ ಸಾವು ಯಾವಾಗ ಬೇಕಾದರೂ ಬರಬಹುದು. ಅಂತಹದ್ದೊಂದು ಅಂಶ ‘ಸಲಗ’ದಲ್ಲಿದೆ. | ದುನಿಯಾ ವಿಜಯ್ ನಟ, ನಿರ್ದೇಶಕ