ಭದ್ರಕಾಳಿ ಸಾಯಿಪಲ್ಲವಿ; ಬರ್ತಡೇ ಗಿಫ್ಟ್

IMG-20210510-WA0027
Published on

ತೆಲುಗು ಮತ್ತು ತಮಿಳಿನಲ್ಲಿ ತಮ್ಮದೆ ಅಪಾರ ಅಭಿಮಾನಿ ಬಳಗ ಹೊಂದಿರುವ ನಟಿ ಸಾಯಿ ಪಲ್ಲವಿ, ಇದೀಗ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಆ ಹೊಸ ಅವತಾರ ಬಹಿರಂಗಕ್ಕೆ ಕಾರಣವಾಗಿದ್ದು ಅವರ ಬರ್ತ್​ಡೇ! ಹೌದು, ಭಾನುವಾರ ಸಾಯಿಪಲ್ಲವಿ ಹುಟ್ಟುಹಬ್ಬ. ಆ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸುವ ನಿಟ್ಟಿನಲ್ಲಿ ‘ಶ್ಯಾಮ್ ಸಿಂಗ್ ರಾಯ್’ ಚಿತ್ರತಂಡ ಅವರ ಫಸ್ಟ್ ಲುಕ್ ರಿವೀಲ್ ಮಾಡಿದೆ. ಕೈಯಲ್ಲಿ ತ್ರಿಶೂಲ ಹಿಡಿದು, ಸಂಹಾರಕ್ಕಿಳಿದ ಭದ್ರಕಾಳಿಯ ಅವತಾರದಲ್ಲಿ ಸಾಯಿ ಪಲ್ಲವಿ ಎದುರಾಗಿದ್ದಾರೆ. ಈ ಲುಕ್ ಅಭಿಮಾನಿ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

ಪಿರಿಯಡ್ ಡ್ರಾಮಾ ಶೈಲಿಯ ಈ ಸಿನಿಮಾದ ಬಹುತೇಕ ಶೂಟಿಂಗ್ ಕೋಲ್ಕತ್ತ ಸೇರಿ ಪಶ್ಚಿಮ ಬಂಗಾಲದ ಹಲವೆಡೆ ನಡೆದಿದ್ದು, ಆ ಪ್ರದೇಶದ ದೇವಿ ಆರಾಧನೆಯನ್ನು ಆಧರಿಸಿ ಸಾಯಿ ಪಲ್ಲವಿ ಲುಕ್ ಬಿಡುಗಡೆ ಮಾಡಲಾಗಿದೆ. ರಾಹುಲ್ ನಿರ್ದೇಶನದ ಈ ಚಿತ್ರಕ್ಕೆ ವೆಂಕಟ್ ಬೊಯಾನಪಲ್ಲಿ ಬಂಡವಾಳ ಹೂಡುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net