ಸದ್ಗುರು ಜತೆಗೆ ಕಾಲ ಕಳೆದ ಹಾಲಿವುಡ್​ ನಟ

will
Published on

ಹಾಲಿವುಡ್​ನ ಖ್ಯಾತ ನಟ ವಿಲ್​ ಸ್ಮಿತ್​, ಇತ್ತೀಚೆಗಷ್ಟೇ ಆಧ್ಯಾತ್ಮ ಗುರು ಸದ್ಗುರು ಅವರನ್ನು ಭೇಟಿ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸದ್ಗುರು, ವಿಲ್​ ಸ್ಮಿತ್​ ಅವರನ್ನು ಭೇಟಿ ಮಾಡಿದ್ದು ಸಂತದ ವಿಚಾರಗಳಲ್ಲೊಂದು ಎಂದಿದ್ದಾರೆ.

ವಿಲ್​ ಸ್ಮಿತ್​  ಮತ್ತವರ ಕುಟುಂಬದೊಟ್ಟಿಗೆ ಸಮಯ ಕಳೆದಿರುವ ಸದ್ಗುರು, ಸಿನಿಮಾ, ಆಧ್ಯಾತ್ಮ ಸೇರಿ ಸಾಕಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ‘ನಿಮ್ಮ ಮತ್ತು ನಿಮ್ಮ ಕುಟುಂಬದ ಜತೆಗೆ ಒಂದಷ್ಟು ಹೊತ್ತು ಸಮಯ ಕಳೆದಿದ್ದು, ನಿಜಕ್ಕೂ ಖುಷಿಯ ಸಂಗತಿ’ ಎಂದಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಬ್ಯಾಡ್ ಬಾಯ್ಸ್ ಫಾರ್​ ಲೈಫ್​ ಸಿನಿಮಾದಲ್ಲಿ ನಟಿಸಿದ್ದರು. ಕಳೆದ ಜನವರಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಸದ್ಯ ಅಮೆರಿಕನ್​ ಟೆನ್ನಿಸ್​ ಕೋಚ್​ ರಿಚರ್ಡ್​ ವಿಲಿಯಮ್ಸ್​ಗೆ ಸಂಬಂಧಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net