ಸಚಿನ್ ಸುವರ್ಣ ಈಗ ಶ್ರೀ ಅಲ್ಲಮಪ್ರಭು

Ullasa Sachin
Published on

ಬೆಂಗಳೂರು: ವಚನಕಾರ ಅಲ್ಲಮಪ್ರಭುಗಳ ಕುರಿತಾದ ಚಿತ್ರವೊಂದು ಈಗಾಗಲೇ ತೆರೆಕಂಡಿದ್ದು, ಅದರಲ್ಲಿ ‘ಅಲ್ಲಮ’ನಾಗಿ ಧನಂಜಯ್ ನಟಿಸಿದರೆ, ಟಿ.ಎಸ್. ನಾಗಾಭರಣ ನಿರ್ದೇಶಿಸಿದ್ದರು. ಈಗ ‘ಶ್ರೀ ಅಲ್ಲಮಪ್ರಭು’ ಎಂಬ ಇನ್ನೊಂದು ಚಿತ್ರ ನಿರ್ಮಾಣವಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ.

ಕಳೆದ ವಾರ ಭಾರತೀಯ ವಿದ್ಯಾಭವನದಲ್ಲಿ ‘ಶ್ರೀ ಅಲ್ಲಮಪ್ರಭು’ ಚಿತ್ರದ ಮುಹೂರ್ತವು ಹಲವು ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಜರುಗಿದೆ. ಈ ಹಿಂದೆ ‘ಎನ್​ಕೌಂಟರ್ ದಯಾನಾಯಕ್’ ಎಂಬ ಚಿತ್ರದಲ್ಲಿ ನಟಿಸಿದ್ದ ಸಚಿನ್ ಸುವರ್ಣ, ಈ ಚಿತ್ರದಲ್ಲಿ ಅಲ್ಲಮಪ್ರಭುಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜ್ ನಿರ್ದೇಶನ ಮಾಡಿದರೆ, ಮಹಾವೀರಪ್ರಭು ಮತ್ತು ಮಾಧವಾನಂದ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net