ವಿಜಯ್​ ದೇವರಕೊಂಡ ಮದುವೆಯಾಗಿದ್ದಾರಾ? ಜಾಹ್ನವಿ ಕಪೂರ್ ಹೇಳಿದ್ದೇನು?

Vijay Devarakonda - Rashmika Mandanna
Published on

ಮುಂಬೈ: ವಿಜಯ್​ ದೇವರಕೊಂಡ ಅವರ ಮದುವೆಯಾಗಿದೆಯಾ? ಇಂಥದ್ದೊಂದು ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಇತ್ತೀಚೆಗೆ ಜಾಹ್ನವಿ ಕಪೂರ್​ ನೀಡಿದ ಹೇಳಿಕೆಯೊಂದು ಈ ಪ್ರಶ್ನೆ ಉದ್ಭವಾಗುವುದಕ್ಕೆ ಕಾರಣವಾಗಿದೆ.

'ಮಿಲಿ' ಚಿತ್ರದ ಪ್ರಚಾರದಲ್ಲಿ ಜಾಹ್ನವಿ ಕೆಲವು ದಿನಗಳಿಂದ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಒಂದು ಪ್ರಶ್ನೆ ಕೇಳಲಾಗಿದೆ. ಚಿತ್ರರಂಗದಲ್ಲಿ ಮೋಸ್ಟ್​ ಎಲಿಜಿಬಲ್​ ಬ್ಯಾಚಲರ್​ ಯಾರು ಎಂಬುದು ಆ ಪ್ರಶ್ನೆ. ಈ ಪ್ರಶ್ನೆ ಉತ್ತರಿಸಿದ ಜಾಹ್ನವಿ, ಆದಿತ್ಯ ರಾಯ್​ ಕಪೂರ್​ ಹೆಸರು ಹೇಳಿದ್ದಾರೆ. ಆಗ ಅವರನ್ನು ಸಂದರ್ಶಿಸುತ್ತಿದ್ದ ವ್ಯಕ್ತಿಯು ವಿಜಯ್​ ದೇವರಕೊಂಡ ಅವರ ಹೆಸರು ಎತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಾಹ್ನವಿ, ವಿಜಯ್​ ದೇವರಕೊಂಡ ಮದುವೆಯಾಗಿದೆಯಲ್ಲ ಎಂದು ಹೇಳಿಬಿಟ್ಟಿದ್ದಾರೆ.

ಯಾವಾಗ ಜಾಹ್ನವಿ ಇಂಥದ್ದೊಂದು ಮಾತು ಹೇಳಿದರೋ, ಆಗ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯಾಗಿದೆ ಎಂಬ ಗುಸುಗುಸು ಶುರುವಾಗಿದೆ. ಏಕೆಂದರೆ, ಈ ಹಿಂದೆ ಅವರಿಬ್ಬರ ಗೆಳೆತನದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಅವರಿಬ್ಬರು ಬರೀ ಸ್ನೇಹಿತರಷ್ಟೇ ಅಲ್ಲ, ಪ್ರೇಮಿಗಳು ಎಂದು ಪ್ರಚಾರವಾಗಿತ್ತು. ಆದರೆ, ವಿಜಯ್ ಮತ್ತು ರಶ್ಮಿಕಾ ಇಬ್ಬರೂ ತಾವು ಒಳ್ಳೆಯ ಗೆಳೆಯರು ಎಂದು ಹೇಳುತ್ತಲೇ ಬಂದಿದ್ದಾರೆ.

ಆದರೆ, ಇದೀಗ ಜಾಹ್ನವಿ ಹೇಳಿರುವ ಮಾತೊಂದು, ರಶ್ಮಿಕಾ ಮಂದಣ್ಣ ಅವರನ್ನು ವಿಜಯ್​ ದೇವರಕೊಂಡ ಮದುವೆಯಾಗಿದ್ದಾರಾ ಎಂದು ಅನುಮಾನಿಸುವಂತಿದೆ. ಇಲ್ಲವಾದರೆ, ಜಾಹ್ನವಿ ಯಾಕೆ ಸುಮ್ಮನೆ ಈ ರೀತಿ ಮಾತನಾಡಬೇಕು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಅಲ್ಲಿಗೆ, ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮದಲ್ಲದ ತಪ್ಪಿಗೆ ಸುದ್ದಿಗೆ ಗ್ರಾಸವಾಗಿದ್ದಾರೆ. ಯಾರೋ ಏನೋ ಹೇಳಿದ್ದು, ಅವರಿಬ್ಬರನ್ನು ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಅವರಿಬ್ಬರ ಪ್ರತಿಕ್ರಿಯೆ ಹೇಗಿರುತ್ತದೋ ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net