ಆದರೆ, ಈ ಎಲ್ಲ ಯಶಸ್ಸಿನ ನಡುವೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬಿಕಿನಿ ತೊಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿದೆ. ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಇದುವರೆಗೂ ಯಾವುದೇ ಸಿನಿಮಾಗಳಲ್ಲಾಗಲಿ ಅಥವಾ ಫೋಟೋಶೂಟ್‌ಗಳಲ್ಲಾಗಲಿ ಗ್ಲಾಮರ್ ಪ್ರದರ್ಶನಕ್ಕಾಗಲಿ, ಸ್ಕಿನ್ ಶೋಗಾಗಲಿ ಒಪ್ಪದ ಮತ್ತು ಸದಾ ಸಾಂಪ್ರದಾಯಿಕ ಹಾಗೂ ಗೌರವಾನ್ವಿತ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ರುಕ್ಮಿಣಿ ವಸಂತ್, ಇದ್ದಕ್ಕಿದ್ದಂತೆ ಇಷ್ಟೊಂದು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಹಾಗೂ ಅವರ ಅಭಿಮಾನಿ ಬಳಗದಲ್ಲಿ ತೀವ್ರ ಆಶ್ಚರ್ಯ ಹಾಗೂ ಅನುಮಾನಗಳನ್ನು ಹುಟ್ಟುಹಾಕಿದೆ.