ಅಂದಹಾಗೆ, '1770-ಏಕ್ ಸಂಗ್ರಾಮ್' ಚಿತ್ರ ಬಂಕಿಮ್ ಚಂದ್ರ ಚಟರ್ಜಿಯವರ ಬಯೋಪಿಕ್ ಆಗಿರಲಿದ್ದು, ಈ ಬಯೋಪಿಕ್ಗೆ ಬಂಕಿಮ್ ಅವರ ಹೆಚ್ಚು ಮಾರಾಟವಾದ ರಾಷ್ಟ್ರೀಯತಾವಾದಿ ಬಂಗಾಳಿ ಕಾದಂಬರಿ 'ಆನಂದಮಠ' ಕಥೆಯಾಗಲಿದೆ. ಈ ಚಿತ್ರವನ್ನು ಎಸ್‌ಎಸ್ 1 ಎಂಟರ್‌ಟೈನ್‌ಮೆಂಟ್‌ನಿಂದ ಶೈಲೇಂದ್ರ ಕುಮಾರ್, ಪಿ ಕೆ ಎಂಟರ್‌ಟೈನ್‌ಮೆಂಟ್‌ನಿಂದ ಸೂರಜ್ ಶರ್ಮಾ ನಿರ್ಮಿಸಲಿದ್ದಾರೆ. '1770-ಏಕ್ ಸಂಗ್ರಾಮ್' ಚಿತ್ರ ಒಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಮೂರು ಭಾಷೆಗಳಲ್ಲಿ ಅಂದರೆ ಹಿಂದಿ, ತಮಿಳು, ತೆಲುಗಿನಲ್ಲಿ ರಿಲೀಸ್ ಆಗಲಿದೆ.