‘ಆರ್‌ಆರ್‌ಆರ್’ ಮೋಷನ್ ಪೋಸ್ಟರ್ ಬಿಡುಗಡೆ: ರಾಜಮೌಳಿ, ಆಲಿಯಾ ಬಗ್ಗೆ ಹರಿದಾಡ್ತಿರೋ ಗಾಳಿ ಸುದ್ದಿಯಾದರೂ ಏನು?!

RajaMouli and Alia 27 MAR 20
Published on

ಬೆಂಗಳೂರು: ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜ ಜತೆಯಾಗಿ ಅಭಿನಯಿಸುತ್ತಿರುವ ‘ಆರ್‌ಆರ್‌ಆರ್’ (ರೌದ್ರಂ ರಣಂ ರುಧೀರಂ) ಚಿತ್ರದಿಂದ ಆಲಿಯಾ ಭಟ್ ಹೊರಬಿದ್ದಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚಿನ ದಿನಗಳಲ್ಲಿ ಕೇಳಿ ಬಂದಿತ್ತು. ಆದರೆ, ನಿರ್ದೇಶಕ ಎಸ್.ಎಸ್. ರಾಜಮೌಳಿ ಆಗಲೀ, ಆಲಿಯಾ ಭಟ್ ಆಗಲೀ ಅಥವಾ ಚಿತ್ರತಂಡದ ಬೇರೆ ಸದಸ್ಯರಾಗಲೀ, ಈ ಸುದ್ದಿಯನ್ನು ದೃಢೀಕರೀಸಿರಲಿಲ್ಲ. ಈಗ ರಾಜಮೌಳಿ ಮತ್ತು ಆಲಿಯಾ ಭಟ್ ನೇರವಾಗಿ ಈ ಸುದ್ದಿ ಸುಳ್ಳು ಎಂದು ಹೇಳದಿದ್ದರೂ, ಪರೋಕ್ಷವಾಗಿ ಸುಳ್ಳು ಎಂದು ಹೇಳಿದ್ದಾರೆ.

ಯುಗಾದಿ ಹಬ್ಬದ ದಿನ ‘ಆರ್‌ಆರ್‌ಆರ್’ ಚಿತ್ರದ ಮೊದಲ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಪೋಸ್ಟರ್ ಟ್ವೀಟ್ ಮಾಡುವ ಸಂದರ್ಭದಲ್ಲಿ, ಆಲಿಯಾ ಅವರನ್ನೂ ಟ್ಯಾಗ್ ಮಾಡಿದ್ದಾರೆ ರಾಜಮೌಳಿ. ಇನ್ನು ಆಲಿಯಾ ಸಹ ಅದೇ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ‘ಆರ್‌ಆರ್‌ಆರ್’ ಮೋಷನ್ ಪೋಸ್ಟರ್ ಶೇರ್ ಮಾಡಿದ್ದಾರೆ. ಒಂದು ಪಕ್ಷ ಆಲಿಯ ಚಿತ್ರದಲ್ಲಿ ನಟಿಸದಿದ್ದರೆ ಅಥವಾ ಚಿತ್ರತಂಡದಿಂದ ಹೊರಬಿದ್ದಿದ್ದರೆ, ಅವರು ಯಾಕೆ ಪೋಸ್ಟರ್ ಹಂಚಿಕೊಳ್ಳಬೇಕಿತ್ತು ಎಂಬ ಮಾತು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಆಲಿಯಾ ಚಿತ್ರತಂಡದಿಂದ ವಾಕೌಟ್ ಮಾಡಿದ್ದರೆ, ರಾಜಮೌಳಿ ಯಾಕೆ ಆಲಿಯಾ ಅವರನ್ನು ಟ್ಯಾಗ್ ಮಾಡಬೇಕಿತ್ತು ಎಂಬ ವಾದವೂ ಇದೆ.

ಮೂಲಗಳ ಪ್ರಕಾರ, ಇದರರ್ಥ ಇಷ್ಟೇ. ‘ಆರ್‌ಆರ್‌ಆರ್’ ಚಿತ್ರತಂಡದಿಂದ ಆಲಿಯಾ ಹೊರಬಿದ್ದಿಲ್ಲ. ಅವರಿನ್ನೂ ಚಿತ್ರದಲ್ಲಿ ನಟಿಸುತ್ತಿರುವುದರಿಂದಲೇ, ಪೋಸ್ಟರ್ ಶೇರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಲಿಯಾ ಚಿತ್ರತಂಡದಿಂದ ಹೊರಬಿದ್ದಿದ್ದಾರೆ ಎಂಬ ಗಾಳಿಸುದ್ದಿಯನ್ನು ಆಲಿಯಾ ಮತ್ತು ರಾಜಮೌಳಿ ಇಬ್ಬರೂ ಪರೋಕ್ಷವಾಗಿ ನಿರಾಕರಿಸಿದ್ದಾರೆಯೇ ಹೊರತು, ಆನ್ ದಿ ರೆಕಾರ್ಡ್ ಬಂದು ಸ್ಪಷ್ಟಪಡಿಸಿಲ್ಲ. ಅವರು ಈ ಕುರಿತು ಪ್ರತ್ಯಕ್ಷವಾಗಿ ಹೇಳಿಕೆ ನೀಡುವವರೆಗೂ, ಈ ಗಾಳಿಸುದ್ದಿ ಹರಿದಾಡುತ್ತಲೇ ಇರುತ್ತದೆ ಎಂಬುದು ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net