ಸೌತ್​ ನಿರ್ಮಾಪಕರ ಸಿನಿಮಾದಲ್ಲಿ ಯಶ್​?; ಜನವರಿ 8ರ ಬರ್ತ್​ಡೇಗೆ ಅಚ್ಚರಿಯ ಮಾಹಿತಿ

Yash new
Yash
Published on

ಬೆಂಗಳೂರು: ರಾಕಿಂಗ್​ಸ್ಟಾರ್ ಯಶ್​ ಸದ್ಯ ಕೆಜಿಎಫ್​ ಚಾಪ್ಟರ್ 2 ಚಿತ್ರದ ಗುಂಗಲ್ಲಿದ್ದಾರೆ. ಇತ್ತೀಚೆಗಷ್ಟೇ ಅದರ ಶೂಟಿಂಗ್​ ಸಹ ಮುಗಿಸಿ, ಸದ್ಯ ಕುಟುಂಬದೊಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಹೀಗಿರುವಾಗಲೇ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಒಂದೇ ಒಂದು ಮಾಹಿತಿಯೂ ಹೊರಬಿದ್ದಿಲ್ಲ. ಇದೀಗ ಒಂದಷ್ಟು ಮೂಲಗಳ ಪ್ರಕಾರ ಯಶ್​ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರಂತೆ.

ಕೆಜಿಎಫ್​ ಸಿನಿಮಾ ಮೂಲಕ ಯಶ್​ ನ್ಯಾಶನಲ್​ ಸ್ಟಾರ್ ಆಗಿ ಬೆಳೆದರು. ಇನ್ನು ಮುಂದಿನ ಅವರ ಸಿನಿಮಾಗಳೆಲ್ಲ, ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿಯೂ ಸಿದ್ಧವಾಗಲಿವೆ ಎಂದೇ ಹೇಳಲಾಗುತ್ತಿತ್ತು, ಹೇಳಲಾಗುತ್ತಿದೆ. ಇದೀಗ ಆ ಮಾತಿಗೆ ತಕ್ಕಂತೆ ಯಶ್​ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬುದು ಗಾಂಧಿನಗರದಿಂದ ಬಂದ ಮಾಹಿತಿ. ಸೌತ್​ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ಖ್ಯಾತ ಚಿತ್ರನಿರ್ಮಾಣ ಸಂಸ್ಥೆಯೊಂದರ ಜತೆಗೆ ಯಶ್​ ಕೈ ಜೋಡಿಸಿದ್ದು, ಬಹುಭಾಷೆಯಲ್ಲಿ ಈ ಸಿನಿಮಾ ಸಿದ್ಧವಾಗಲಿದೆಯಂತೆ. ಜನವರಿ 8ರ ಯಶ್​ ಜನ್ಮದಿನದಂದೇ ಈ ಘೋಷಣೆಯೂ ಆಗಲಿದೆಯಂತೆ.

ಇದೆಲ್ಲದರ ನಡುವೆ ಕೆಜಿಎಫ್​ ಮೊದಲ ಭಾಗ ಸಿನಿಮಾ ತೆರೆಕಂಡ ಬಳಿಕ ಯಶ್​ ‘ಕಿರಾತಕ 2’ ಒಪ್ಪಿಕೊಂಡಿದ್ದರು. ಮುಹೂರ್ತವನ್ನೂ ನೆರವೇರಿಸಿಕೊಳ್ಳಲಾಗಿತ್ತು. ಇದೀಗ ಆ ಚಿತ್ರವೂ ಮತ್ತೆ ಟೇಕ್​ ಆಫ್​ ಆಗಲಿದೆಯೇ ಎಂಬ ಮಾತು ಕೇಳಿಬರುತ್ತಿದೆಯಾದರೂ, ಆ ಬಗ್ಗೆ ಸ್ಪಷ್ಟ ಮಾಹಿತಿ ನಿರ್ದೇಶಕ ಅನಿಲ್ ಕುಮಾರ್ ಅವರಿಂದಾಗಲಿ, ಯಶ್​ ಅವರಿಂದಾಗಲಿ ಬಹಿರಂಗವಾಗಿಲ್ಲ. ಇತ್ತ ಮಫ್ತಿ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್​ ಜತೆಗೆ ಯಶ್​ ನಟಿಸಲಿದ್ದಾರೆ ಎಂಬ ಸುದ್ದಿಯೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಒಟ್ಟಾರೆಯಾಗಿ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅವರ ಬರ್ತ್​ಡೇ ದಿನದಂದೇ ಗೊತ್ತಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net