

ಬೆಂಗಳೂರು: ನಟ ದರ್ಶನ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾದ 2ನೇ ಹಾಡು ಬಿಡುಗಡೆಯಾಗಿದೆ.
ಹೋಳಿ ಹಬ್ಬದ ಸಂಭ್ರಮದಂದು ಜೈ ಶ್ರೀರಾಮ್ ಹಾಡು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಕೊಡುಗೆ ನೀಡಿದ್ದಾರೆ. ರಾಮನಾಮ ಹಾಡಿರೋ... ರಾಮ ಬರುವನು... ಅವನ ಹಿಂದೆ ಹನುಮ ಇದ್ದೆ ಇರುವನು ಎಂಬ ಹಾಡು ಕೇಳಲು ಮಧುರವಾಗಿದ್ದು ಅಭಿಮಾನಿಗಳಿಗೆ ಹಾಡು ಇಷ್ಟವಾಗಲಿದೆ ಎಂಬುದು ನಿರ್ದೇಶಕರ ಅಭಿಪ್ರಾಯ.
ಇತ್ತೀಚೆಗೆ ರಾಬರ್ಟ್ ಸಿನಿಮಾದ ಮೊದಲ ಹಾಡು ಬಾ..ಬಾ.. ನಾ..ರೆಡಿ ಬಿಡುಗಡೆಯಾಗಿ ಸಿನಿಮಾ ರಸಿಕರನ್ನು ರಂಜಿಸಿತ್ತು.
ರಾಬರ್ಟ್ ಸಿನಿಮಾ ಏಪ್ರಿಲ್ 9 ರಂದು ತೆರೆ ಮೇಲೆ ಬರುವುದು ಬಹುತೇಕ ಖಚಿತವಾಗಿದೆ. ದರ್ಶನ್ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ.
ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಮೂರು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ರಾಬರ್ಟ್ ಶೇಡ್ ಕೂಡ ಒಂದು ಉಳಿದ ಎರಡು ಶೇಡ್ಗಳನ್ನು ಚಿತ್ರಿ ಬಿಡುಗಡೆಯಾದ ನಂತರ ಗೊತ್ತಾಗಲಿದೆ.
ಸಿಮಾದಲ್ಲಿ ನಟ ದರ್ಶನ್ಗೆ ನಾಯಕಿಯಾಗಿ ಆಶಾ ಭಟ್ ಬಣ್ಣ ಹಚ್ಚಿದ್ದಾರೆ. ದೇವರಾಜ್, ಚಿಕ್ಕಣ್ಣ, ಟಾಲಿವುಡ್ ನಟ ಜಗಪತಿ ಬಾಬು, ವಿನೋದ್ ಪ್ರಭಾಕರ್ ಹಲವರು ನಟಿಸಿದ್ದಾರೆ. (ದಿಗ್ವಿಜಯ ನ್ಯೂಸ್)