ರಿಲೀಸ್ ಆದ ಒಂದೂವರೆ ತಿಂಗಳಲ್ಲೇ ಅಮೇಜಾನ್​ ಪ್ರೈಂಗೆ ರಾಬರ್ಟ್​ ಎಂಟ್ರಿ!

robert
Published on

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್​ ಆದ ಒಂದೂವರೆ ತಿಂಗಳಲ್ಲಿ ಸ್ಯಾಂಡಲ್​ವುಡ್​ ಅನೇಕ ದಾಖಲೆಗಳನ್ನು ಮುರಿದಿರುವ ಈ ಸಿನಿಮಾ ಇದೀಗ ಅಮೇಜಾನ್​ ಪ್ರೈಂ ಗೆ ಬರಲು ಸಿದ್ಧವಾಗಿದೆ.

ಇದೇ ತಿಂಗಳ 25ರಿಂದ ಅಮೇಜಾನ್​ನಲ್ಲಿ ರಾಬರ್ಟ್​ ಸಿನಿಮಾ ಪ್ರದರ್ಶನ ಕಾಣಲಿದೆ. ದರ್ಶನ್​ ಜತೆ ನಾಯಕ ನಟಿಯಾಗಿ ಆಶಾ ಭಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್​ ಕಿಶೋರ್​ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಎಸ್​ ಉಮಾಪತಿ ಬಂಡವಾಳ ಹೂಡಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮಾರ್ಚ್​ 11 ರಂದು ಬಿಡುಗಡೆಗೊಂಡಿತ್ತು. ಇದೀಗ ಈ ಐದೂ ಭಾಷೆಗಳಲ್ಲಿ ಅಮೇಜಾನ್​ ಪ್ರೈಂ ಸೇರಲಿದೆ.

ರಿಲೀಸ್​ ಆಗಿ ಕೆಲವೇ ದಿನಗಳಲ್ಲಿ ಒಟಿಟಿ ಸೇರಿದ ಸಿನಿಮಾಗಳಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾ ಕೂಡ ರಿಲೀಸ್​ ಆಗಿ ಕೆಲವೇ ದಿನಗಳಲ್ಲಿ ಪ್ರೈಂನಲ್ಲಿ ಲಭ್ಯವಾಗಿತ್ತು. ಕರೊನಾ ಕಾರಣದಿಂದಾಗಿ ಜನರು ಥಿಯೇಟರ್​ಗಳತ್ತ ಬರಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾಗಳನ್ನು ಒಟಿಟಿಗಳಿಗೆ ಮಾರಾಟ ಮಾಡಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net