ರಿಷಿ ಇರೋದೇ ಹೀಗಾ?; ಟೀಸರ್ ಮೂಲಕ ‘ಇವ್ನು’ ಬಂದ

Rishi
Published on

ಬೆಂಗಳೂರು: ಹೊಸ ರೀತಿಯ ಪಾತ್ರಗಳ ಮೂಲಕವೇ ಗಮನ ಸೆಳೆದವರು ‘ಆಪರೇಷನ್ ಅಲಮೇಲಮ್ಮ’ ಖ್ಯಾತಿಯ ನಟ ರಿಷಿ. ಅವರ ಈ ಹಿಂದಿನ ಸಿನಿಮಾಗಳಲ್ಲಿ ಅಂಥ ಪ್ರಯತ್ನಗಳಾಗಿವೆ. ಇದೀಗ ಮತ್ತೊಂದು ವಿಭಿನ್ನ ಕಥೆಯ ‘ನೋಡಿ ಸ್ವಾಮಿ ಇವ್ನು ಇರೋದೆ ಹೀಗೆ’ ಚಿತ್ರದ ಮೂಲಕ ಆಗಮಿಸಿದ್ದಾರೆ. ಇದೀಗ ಆ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿದೆ. ಹಾಗಾದರೆ ಏನಿದು ಕಥೆ?

ಈ ಚಿತ್ರದಲ್ಲಿ ಕಥಾನಾಯಕನ ವರ್ತನೆಯೇ ವಿಚಿತ್ರವಾಗಿದೆ. ರೈಲಿನ ಹಳಿಗೆ ತಲೆ ಕೊಡ್ತಾನೆ. ಗನ್​ನಿಂದ ಶೂಟ್ ಮಾಡಿಕೊಳ್ಳುವುದಕ್ಕೆ ಯತ್ನಿಸುತ್ತಾನೆ. ಅಷ್ಟೇ ಅಲ್ಲ ತನ್ನನ್ನು ಕೊಲೆ ಮಾಡುವುದಕ್ಕೆಂದೇ ಬೇರೆಯವರಿಗೆ ಸುಪಾರಿ ಸಹ ಕೊಡ್ತಾನೆ. ಹೀಗೆ ಚಿತ್ರವಿಚಿತ್ರವಾಗಿಯೇ ಟೀಸರ್ ನೋಡಿಸಿಕೊಂಡು ಹೋಗುತ್ತದೆ.

ಸದ್ಯ ಟೀಸರ್ ಹೊರತಂದ ತಂಡ, ಶೀಘ್ರದಲ್ಲಿಯೇ ರಿಲೀಸ್ ದಿನಾಂಕವನ್ನೂ ಘೋಷಣೆ ಮಾಡಲಿದೆ. ಇಸ್ಲಾಹುದ್ದೀನ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ, ಗ್ರೀಷ್ಮಾ ಶ್ರೀಧರ್, ಅಪೂರ್ವ ಭಾರದ್ವಾಜ್ ಸೇರಿ ಹಲವರಿದ್ದಾರೆ. ಅಮ್ರೇಜ್ ಸೂರ್ಯವಂಶಿ ಈ ಚಿತ್ರ ನಿರ್ವಿುಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net