

ಬೆಂಗಳೂರು: ನಟ ಕಮ್ ನಿರ್ದೇಶಕ ರಿಷಭ್ ಶೆಟ್ಟಿ ಮಾರ್ಚ್ ಮೊದಲ ವಾರದಿಂದ ಕಾಡು ಸೇರಲಿದ್ದಾರೆ, ಅದು ಅವರ ನಿರ್ದೇಶನದ ‘ರುದ್ರ ಪ್ರಯಾಗ’ ಚಿತ್ರದ ಚಿತ್ರೀಕರಣಕ್ಕಾಗಿ. ಅನಂತನಾಗ್, ಶ್ರದ್ಧಾ ಶ್ರೀನಾಥ್, ನಟನೆಯ ಈ ಚಿತ್ರದ ಕಥೆ ಹೆಚ್ಚು ಕಾಡಿನಲ್ಲಿಯೇ ನಡೆಯುತ್ತದೆ.
ಹಾಗಾಗಿ ರಿಷಭ್ ಆಂಡ್ ಗ್ಯಾಂಗ್ ದಾಂಡೇಲಿ, ಖಾನಾಪುರ, ಲೋಂಡಾದಲ್ಲಿ ಈಗಾಗಲೇ ಲೊಕೇಶನ್ ನೋಡಿಕೊಂಡು ಬಂದಿದ್ದು, ಮಾರ್ಚ್ ಮೊದಲ ವಾರದಲ್ಲಿಯೇ ದಾಂಡೇಲಿ ಸುತ್ತಮುತ್ತ ಕಾಡಿನಲ್ಲಿ ಶೂಟಿಂಗ್ ಆರಂಭಿಸಲಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಸಿನಿಮಾಟೋಗ್ರಫರ್ ಕರಮ್ ಚಾವ್ಲಾ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರದ ಮೂಲಕ ರಿಷಭ್ ಜತೆ ಮತ್ತೆ ಒಂದಾಗಿದ್ದಾರೆ. ಉಳಿದ ತಾರಾಗಣ, ತಂತ್ರಜ್ಞರ ತಂಡವನ್ನು ರಿಷಭ್ ಶೆಟ್ಟಿ ಸದ್ಯದಲ್ಲೆ ಅನೌನ್ಸ್ ಮಾಡಲಿದ್ದಾರಂತೆ.