‘ಕಾಂತಾರ ಚಾಪ್ಟರ್ 1' ಗಾಗಿ ಕಳರಿಪಯಟ್ಟು ಅಭ್ಯಾಸದಲ್ಲಿ ತೊಡಗಿದ ರಿಷಬ್ ಶೆಟ್ಟಿ

fea
Published on

ಬೆಂಗಳೂರು:  ನಟ ರಿಷಬ್ ಶೆಟ್ಟಿ ಅವರಿಗೆ ಈಚೆಗಷ್ಟೇ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 'ಕಾಂತಾರ' ಚಿತ್ರದ ಅಭಿನಯಕ್ಕಾಗಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದಾರೆ. 'ಕಾಂತಾರ' ಸಿನಿಮಾದಿಂದ ದೇಶಾದ್ಯಂತ ಫೇಮಸ್ ಆಗಿರುವ ರಿಷಬ್, ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇದರ ಬೆನ್ನಲ್ಲೇ ಇದೀಗ ‘ಕಾಂತಾರ ಚಾಪ್ಟರ್ 1’ರ ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ.

ಕೇರಳದ ಪುರಾತನ ಸಮರ ಕಲೆ ‘ಕಲರಿಪಯಟ್ಟು’ ಅನ್ನು ರಿಷಬ್ ಕಲಿಯುತ್ತಿದ್ದಾರೆ. ಹೌದು.. ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿ ಕಲರಿಪಯಟ್ಟು ಸಮರ ಕಲೆಯನ್ನು ಬಳಸಲಾಗುತ್ತಿದೆ. ಸಿನಿಮಾದ ನಾಯಕ ಕಲರಿಪಯಟ್ಟು ಸಮರ ಕಲೆಯ ಪರಿಣಿತನಾಗಿರುತ್ತಾನೆ, ಹಾಗಾಗಿ ನಾಯಕ ಪಾತ್ರಧಾರಿ ರಿಷಬ್  ಕಲರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.

ಇತ್ತೀಚೆಗೆ ರಿಷಬ್ ಶೆಟ್ಟಿ ಕಳರಿಪಯಟ್ಟು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಪಾತ್ರಕ್ಕಾಗಿ ಸಕಲ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿತ್ತು. ಈಗ ಚಿತ್ರದಲ್ಲಿನ ಕಳರಿಪಯಟ್ಟು ವೀರನ ಪಾತ್ರದ ಲುಕ್ ಅನಾವರಣ ಆಗಿದೆ. ಕಳರಿಪಯಟ್ಟು ವೀರನ ಭಂಗಿಯಲ್ಲಿ ಖಡಕ್ ಆಗಿ ನಟ ಕಾಣಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

ಇತ್ತೀಚೆಗೆ ರಿಷಬ್ ಕಾಂತಾರ ಪ್ರೀಕ್ವೆಲ್​ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಅನೌನ್ಸ್ ಆದ ದಿನದಿಂದ ಸುದ್ದಿಯಲ್ಲಿದ್ದು ಚಿತ್ರೀಕರಣದಲ್ಲಿ ನಿರತವಾಗಿದೆ. ಕಾಂತಾರ 1 ಸಿನಿಮಾವು ಆಗಸ್ಟ್ ಕೊನೆಯ ವಾರದಲ್ಲಿ 4ನೇ ಹಂತದ ಚಿತ್ರೀಕರಣ ನಡೆಯಲಿದ್ದು, ಕಂಪ್ಲಿಟ್ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯಗಳು ಶೂಟ್ ಮಾಡಲಾಗುತ್ತದೆ. ಚಿತ್ರವು ಪೂರ್ಣಗೊಳ್ಳುವ ಹಂತದಲ್ಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿವೆ.

‘ಕಾಂತಾರ ಚಾಪ್ಟರ್ 1’ ಸಿನಿಮಾ ಕಾಂತಾರದ ಹಿಂದಿನ ಕತೆಯಾಗಿದೆ. ಕದಂಬ ಯುಗದ ಪಂಜುರ್ಲಿ ದೇವತೆಯ ಕಥೆಯನ್ನು ಇದು ಹೊಂದಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಬಹುನಿರೀಕ್ಷಿತ ಚಿತ್ರವು 2025ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net