ಪ್ರಕೃತಿಯ ಮಡಿಲಲ್ಲಿ ರಣ್ವಿತ್ ಮೊದಲ ಹುಟ್ಟುಹಬ್ಬ

Ranvit Shetty Final
Published on

ರಿಷಭ್ ಶೆಟ್ಟಿ ಮಗ ರಣ್ವಿತ್‌ನ ಮೊದಲ ಹುಟ್ಟುಹಬ್ಬ ಮೊನ್ನೆ ಇದ್ದಿದ್ದು ಗೊತ್ತೇ ಇದೆ. ಅದಕ್ಕೆ ರಿಷಭ್ ಮಗನಿಗೆ ಒಂದು ಸ್ಪೆಷಲ್ ವೀಡಿಯೋ ಮೂಲಕ ವಿಶ್ ಮಾಡಿದ್ದು ಸಹ ಗೊತ್ತಿದೆ. ಇನ್ನು ಸಂಜೆ, ಮನೆಯ ತೋಟದಲ್ಲೇ ಮೆನಯವರೆಲ್ಲಾ ಸೇರಿ ರಣ್ವಿತ್ ಹುಟ್ಟುಹಬ್ಬವನ್ನು ಪುಟ್ಟದಾಗಿ ಆಚರಿಸುತ್ತಿರುವುದಾಗಿ ರಿಷಭ್ ಹೇಳಿಕೊಂಡಿದ್ದರು. ಆ ಹುಟ್ಟುಹಬ್ಬದ ಸಂಭ್ರಮದ ಫೋಟೋಗಳನ್ನು ಬುಧವಾರ ತಮ್ಮ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ ರಿಷಭ್.

ತಮ್ಮ ಹುಟ್ಟಿ ಬೆಳೆದ ತೋಟದ ಮನೆಯಲ್ಲೇ ರಣ್ವಿತ್‌ಗಾಗಿ ತೆಂಗು, ಅಡಿಕೆ, ಬಾಳೆಯಿಂದ ಸಿಂಗಾರ ಮಾಡುವುದರ ಜತೆಗೆ, ಕಾಡಿನ ಹೂ ಹಣ್ಣಗಳನ್ನೂ ಅವರು ಅಲಂಕಾರಕ್ಕೆ ಬಳಸಿಕೊಂಡಿದ್ದಾರೆ. ಇನ್ನು ಮನೆಯಲ್ಲೇ ಕೇಕ್ ಮಾಡಿ, ತಮ್ಮ ಕುಟುಂಬದವರ ಜತೆಗೆ ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ.

‘ನಾ ಹುಟ್ಟಿ ಬೆಳೆದ ಮನೆಯಲ್ಲಿ ಹಳ್ಳಿ ಸೊಗಡಿನ ಅಲಂಕಾರ. ತೆಂಗು-ಅಡಿಕೆಯ ಹಿಂಗಾರ. ನಡುವೆ ಬಾಳೆಯ ಸಿಂಗಾರ. ಕಾಡಿನ ಹೂ ಹಣ್ಣುಗಳ ಸುಗಂಧ. ಮೊದಲ ಮಳೆಯ ಸಂಭ್ರಮದಲ್ಲಿ ಮುದ್ದು ಮಗನ ಮೊದಲ ಜನುಮ ದಿನದ ಆಚರಣೆ’ ಎಂದು ರಿಷಭ್ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net