ಪ್ಲಾಸ್ಟಿಕ್ ಸರ್ಜರಿ ಮಾಡಿಸಿಲ್ಲ!: ಬಾಲಿವುಡ್ ನಟಿ ರಿಮಿ ಸೇನ್ ಉತ್ತರ

rimi 1
Published on

ಬೆಂಗಾಲಿ ಚಿತ್ರ ‘ದಾಮು’ ಮೂಲಕ 1996ರಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ರಿಮಿ ಸೇನ್, ನಂತರ ತೆಲುಗು ಹಾಗೂ ಹಿಂದಿಯಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, 2016ರಲ್ಲಿ ತೆರೆಕಂಡಿದ್ದ ‘ಭುದಿಯಾ ಸಿಂಗ್ : ಬಾರ್ನ್ ಟು ರನ್’ ಬಳಿಕ ರಿಮಿ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಎಂಟು ವರ್ಷಗಳಿಂದ ಚಿತ್ರರಂಗದಿಂದ ದೂರ ಇದ್ದಾರೆ. ಆಗಾಗ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ, ಮಾಹಿತಿ ಹಂಚಿಕೊಳ್ಳುತ್ತಾರೆ. ಇಂತಹದ್ದೇ ಫೋಟೋ ಹಂಚಿಕೊಂಡಿದ್ದ ರಿಮಿಗೆ ಕೆಲವರು ಪ್ಲಾಸ್ಟಿಕ್ ಸರ್ಜರಿ’ ಮಾಡಿಸಿಕೊಂಡಿರಬಹುದು ಎಂದು ಕಮೆಂಟ್ ಮಾಡಿದ್ದಾರಂತೆ. ಇದಕ್ಕೆ ತಕ್ಷಣವೇ ನಟಿ ಉತ್ತರಿಸಿದ್ದಾರೆ. ‘ನಾನು ಯಾವುದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ. ನನ್ನ ಮುಖದ ಹೊಳಪು ನೋಡಿ ಕೆಲವರು ಹಾಗೇ ಹೇಳಿದ್ದಾರೆ. ಇದಕ್ಕಾಗಿ ನಾನು ಬೋಟಾಕ್ಸ್ ಹಾಗೂ ಪಿಆರ್‌ಪಿ ಚಿಕಿತ್ಸೆ ಪಡೆಯುತ್ತೇನೆ. ನನಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಫೇಸ್‌ಲಿಫ್ಟ್​ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ. ಅದಕ್ಕಾಗಿ ದೇಶದಲ್ಲಿಯೇ ತಜ್ಞ ವೈದ್ಯರಿದ್ದಾರೆ. ಬೇರೆ ಕಡೆ ಹೋಗಬೇಕು ಎಂದೇನಿಲ್ಲ. ಆದರೆ, ಇದು ಸದ್ಯ ಅಲ್ಲ, ನನಗೆ 50 ವರ್ಷ ದಾಟಿದ ಮೇಲೆ ಫೇಸ್‌ಲಿಫ್ಟ್​ ಮಾಡಿಸಿಕೊಳ್ಳುತ್ತೇನೆ’ ಎಂದಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net