ದೇಶದ ಶ್ರೀಮಂತ ಹಾಸ್ಯನಟ ಯಾರೆಂದು ಗೊತ್ತಾದ್ರೆ ದಂಗಾಗ್ತೀರಾ: ರಜಿನಿ, ರಣಬೀರ್​, ಪ್ರಭಾಸ್​ಗಿಂತಲೂ ರಿಚ್​! Richest Comedian

Richest Comedian
Published on

Richest Comedian : ಭಾರತದ ಅತ್ಯಂತ ಜನಪ್ರಿಯ ಹಾಸ್ಯನಟ ಯಾರೆಂದು ಕೇಳಿದಾಗ ನೆನಪಿಗೆ ಬರುವ ಮೊದಲ ಹೆಸರು ಕಪಿಲ್ ಶರ್ಮ. ಇದು ಅನೇಕರು ಒಪ್ಪುವ ಸತ್ಯ. ಕಪಿಲ್ ಶರ್ಮ ತಮ್ಮ ಕಾರ್ಯಕ್ರಮಗಳು, ವೇದಿಕೆ ಪ್ರದರ್ಶನಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಆದ್ದರಿಂದ, ಅವರು ದೇಶದ ಅತ್ಯಂತ ಶ್ರೀಮಂತ ಹಾಸ್ಯನಟರಾಗಿರಬೇಕು ಎಂದು ಅನೇಕರು ಭಾವಿಸುತ್ತಾರೆ. ಆದರೆ, ಅವರು ಅತ್ಯಂತ ಶ್ರೀಮಂತ ಹಾಸ್ಯನಟನಲ್ಲ. ಮತ್ತೊಬ್ಬ ಹಾಸ್ಯ ರಾಜ ಇದ್ದಾನೆ. ಅವರು ಅತ್ಯಂತ ಶ್ರೀಮಂತ ಹಾಸ್ಯನಟ. ಅವರು ಕಪಿಲ್ ಶರ್ಮ ಮತ್ತು ಅನೇಕ ಬಾಲಿವುಡ್ ನಟರನ್ನೂ ಮೀರಿಸಿದ್ದಾರೆ.

brahmanandam
ಟಾಲಿವುಡ್‌ನ 'ಕಾಮಿಡಿ ಕಿಂಗ್' ಎಂದೇ ಖ್ಯಾತರಾಗಿರುವ ತೆಲುಗು ನಟ ಬ್ರಹ್ಮಾನಂದಂ ಭಾರತದ ಅತ್ಯಂತ ಶ್ರೀಮಂತ ಹಾಸ್ಯನಟ ಎಂದು ಅನೇಕ ವರದಿಗಳು ತಿಳಿಸಿವೆ. ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ (ವಿಶ್ವ ದಾಖಲೆ) ಬ್ರಹ್ಮಾನಂದಂ, ತಮ್ಮ ವೃತ್ತಿಜೀವನದಲ್ಲಿ 60 ಮಿಲಿಯನ್ ಡಾಲರ್ ಸಂಪತ್ತನ್ನು ಗಳಿಸಿದ್ದಾರೆ. ಅಂದರೆ, 500 ಕೋಟಿ ರೂ.ಗೂ ಹೆಚ್ಚು ನಿವ್ವಳ ಮೌಲ್ಯ. ಇದು ನಟನನ್ನು ಭಾರತದ ಎಲ್ಲಾ ಹಾಸ್ಯನಟರಿಗಿಂತ ಮಾತ್ರವಲ್ಲದೆ, ರಣಬೀರ್ ಕಪೂರ್ (350 ಕೋಟಿ ರೂ.), ಪ್ರಭಾಸ್ (300 ಕೋಟಿ ರೂ.) ಮತ್ತು ರಜನಿಕಾಂತ್ (400 ಕೋಟಿ ರೂ.) ಗಿಂತ ಹೆಚ್ಚು ಶ್ರೀಮಂತನನ್ನಾಗಿ ಮಾಡಿದೆ.

ಭಾರತದ ಇತರ ಪ್ರಮುಖ ಹಾಸ್ಯನಟರು ಯಾರೂ ಬ್ರಹ್ಮಾನಂದಂ ಅವರ ಹತ್ತಿರಕ್ಕೂ ಸುಳಿದಿಲ್ಲ. ಕಪಿಲ್ ಶರ್ಮಾ ಅವರ ನಿವ್ವಳ ಮೌಲ್ಯ 300 ಕೋಟಿ ರೂ. ಎಂದು ವರದಿಯಾಗಿದೆ. ದೇಶದ ಇತರ ಯಾವುದೇ ಹಾಸ್ಯನಟರು ತಮ್ಮ ನಿವ್ವಳ ಮೌಲ್ಯದಲ್ಲಿ 100 ಕೋಟಿ ರೂ.ಗಳನ್ನು ದಾಟಿಲ್ಲ. ಆದರೆ, ಬ್ರಹ್ಮಾನಂದಂ 500 ಕೋಟಿ ಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಬ್ರಹ್ಮಾನಂದಂ ಅವರು ಕಾಲೇಜು ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರಿಗೆ ಅತ್ಯುತ್ತಮ ಮಿಮಿಕ್ರಿ ಕೌಶಲ್ಯವಿದೆ. ಅವರು 80ರ ದಶಕದಲ್ಲಿ ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1985 ರಲ್ಲಿ ಟಿವಿಗೆ ಪಾದಾರ್ಪಣೆ ಮಾಡಿದರು. 1987ರಲ್ಲಿ ಸಿನಿಮಾ ರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಆಹಾ ನಾ ಪೆಲ್ಲಂಟ ಹೆಸರಿನ ಸಿನಿಮಾ ಅವರ ವೃತ್ತಿಜೀವನದಲ್ಲಿ ಹೊಸ ತಿರುವು ನೀಡಿತು. ಅಂದಿನಿಂದ, ಆಫರ್​ಗಳು ಹರಿದು ಬಂದವು.

90ರ ದಶಕದಲ್ಲಿ, ಬ್ರಹ್ಮಾನಂದಂ ಪ್ರತಿ ಎರಡು ಅಥವಾ ಮೂರು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದರು. ಪರಿಣಾಮವಾಗಿ, ಅವರ ಬೇಡಿಕೆ ಹೆಚ್ಚಾಯಿತು. ಅದರೊಂದಿಗೆ, ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸುತ್ತಲೇ ಇದ್ದರು. ಅವರ ಸಂಭಾವನೆಯು ಟಾಪ್ ಹೀರೋಗಳಿಗಿಂತ ಹೆಚ್ಚಿರುವುದು ಆಶ್ಚರ್ಯವೇನಿಲ್ಲ. 2012ರಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅವರನ್ನು ಅತಿ ಹೆಚ್ಚು ಸ್ಕ್ರೀನ್ ಕ್ರೆಡಿಟ್‌ಗಳನ್ನು ಹೊಂದಿದ್ದಕ್ಕಾಗಿ ಗೌರವಿಸಿತು. 2020ರ ಹೊತ್ತಿಗೆ, ಅವರು ಪ್ರೇಮ್ ನಜೀರ್ ಅವರನ್ನು ಮೀರಿಸಿದರು. ಯಾವುದೇ ನಟನಿಗೆ ಇದುವರೆಗೆ ಸಿಗದಷ್ಟು ಕ್ರೆಡಿಟ್‌ಗಳನ್ನು ಬ್ರಹ್ಮಾನಂದ ಪಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net