

ಎರಡು ವರ್ಷಗಳ ಹಿಂದೆಯೇ ಬಾಲಿವುಡ್ನ ಜನಪ್ರಿಯ ಜೋಡಿ ರಿಚಾ ಛಡ್ಡಾ ಮತ್ತು ಅಲಿ ಫಜಲ್ ಮದುವೆ ಫಿಕ್ಸ್ ಆಗಿತ್ತು. ಕರೊನಾ ಮೊದಲ ಅಲೆಯಿಂದಾಗಿ ಮದುವೆ ಮುಂದಕ್ಕೆ ಹೋಯಿತು. ಕೊನೆಗೆ ಕಳೆದ ವರ್ಷ ಎಂದು ಸುದ್ದಿಯಾಯಿತು. ಕೋವಿಡ್ ಎರಡನೆಯ ಅಲೆಯಿಂದ ಮತ್ತೊಮ್ಮೆ ಮುಂದೂಡಲ್ಪಟ್ಟಿತ್ತು. ಈಗ ರಿಚಾ ಮತ್ತು ಅಲಿ ಮದುವೆ ಕೊನೆಗೂ ಫಿಕ್ಸ್ ಆಗಿದೆ. ಈ ತಿಂಗಳ 30ಕ್ಕೆ ಈ ಜೋಡಿ ಮದುವೆಯಾಗಲಿದೆ.
ರಿಚಾ ಮತ್ತು ಅಲಿ ಇನ್ನಷ್ಟೇ ಮದುವೆಯಾಗಬೇಕಿದ್ದರೂ, ಅವರಿಬ್ಬರೂ ಗಂಡ-ಹೆಂಡತಿ ಎಂದು ಎಷ್ಟೋ ಜನ ಭಾವಿಸಿದ್ದಾರೆ. ಅದಕ್ಕೆ ಕಾರಣ, ಕಳೆದ ಕೆಲವು ವರ್ಷಗಳಿಂದ ಇಬ್ಬರೂ ಒಟ್ಟಿಗೆ ಇರುತ್ತಿದ್ದರು. 2012ರಲ್ಲಿ ಬಿಡುಗಡೆಯಾದ ‘ಫುಕ್ರೇ’ ಚಿತ್ರದಲ್ಲಿ ಇಬ್ಬರೂ ಜತೆಗೆ ನಟಿಸಿದ್ದರು. ಅಲ್ಲಿ ಅವರಿಬ್ಬರ ನಡುವೆ ಮೊದಲ ಬಾರಿಗೆ ಪರಿಚಯವಾಯಿತಂತೆ. ಏಳು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ರಿಚಾಗೆ ಅಲಿ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ರಿಚಾ ಸಹ ಒಪ್ಪಿದ್ದಾರೆ. ಆಮೇಲೆ ಇಬ್ಬರೂ ಜತೆಗೆ ಇರುವುದಕ್ಕೆ ಪ್ರಾರಂಭಿಸಿದ್ದಾರೆ. ಆಮೇಲೆ ಮದುವೆ ಎರಡು ಬಾರಿ ಮುಂದೂಡಲ್ಪಟ್ಟು, ಈಗ ಇಬ್ಬರೂ ಅಧಿಕೃತವಾಗಿ ಮದುವೆಯಾಗುತ್ತಿದ್ದಾರೆ.
ಅಂದಹಾಗೆ, ರಿಚಾ ಮತ್ತು ಅಲಿ ವಿವಾಹವು, 110 ವರ್ಷಗಳಷ್ಟು ಹಳೆಯದಾದ ದೆಹಲಿಯ ಜಿಮ್ಾನಾದಲ್ಲಿ ನಡೆಯಲಿದೆ. ಆ ನಂತರ ಅ.2ರಂದು ದೆಹಲಿಯಲ್ಲೊಂದು ರಿಸೆಪ್ಶನ್ ನಡೆಯಲಿದ್ದು, ಅ. 7ಕ್ಕೆ ಮುಂಬೈನಲ್ಲಿ ಇನ್ನೊಂದು ರಿಸೆಪ್ಶನ್ ನಡೆಯಲಿದೆ. ಈ ಮದುವೆಯಲ್ಲಿ ಬಾಲಿವುಡ್ನ ಹಲವು ಜನಪ್ರಿಯ ನಟ-ನಟಿಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. -ಏಜೆನ್ಸೀಸ್