

ಸಿನಿಮಾ ಇಂಡಸ್ಟ್ರಿಯಲ್ಲಿ ಕಾಂಟ್ರೊವರ್ಸಿ ಮ್ಯಾನ್ ಎಂದರೆ ಮೊದಲು ಕೇಳಿಬರುವ ಹೆಸರೇ ರಾಮ್ ಗೋಪಾಲ್ ವರ್ಮ ಅವರದ್ದು. ನಿರ್ದೇಶನ ಇರಲಿ, ನಿರ್ಮಾಣ ಇರಲಿ ಪ್ರತಿ ಸಿನಿಮಾ ಮೂಲಕ ಏನಾದರೊಂದು ವಿವಾದ ಎಬ್ಬಿಸುವುದೇ ಅವರ ಪಬ್ಲಿಸಿಟಿ ಗಿಮಿಕ್. ಈಗ ಅದಕ್ಕೆ ಸಾಕ್ಷ್ಯ ಎಂಬಂತೆ ಮತ್ತೊಂದು ಭೂಗತ ಲೋಕದ ಕಹಾನಿಯನ್ನು ಹಿಡಿದು ಬರುತ್ತಿದ್ದಾರೆ. ಆ ಕಹಾನಿ ಬೇರಾರದ್ದೂ ಅಲ್ಲ, ದಾವೂದ್ ಇಬ್ರಾಹಿಂ!
ಹೌದು, ಆರ್ಜಿವಿ ಸೀದಾ ಅಂಡರ್ವರ್ಲ್ಡ್ಗೆ ಕೈಗೆ ಹಾಕಿದ್ದಾರೆ. ಮುಂಬೈ ಭೂಗತ ಲೋಕದ ದೊರೆ, ಮಾಫಿಯಾ ಕಿಂಗ್ ದಾವೂದ್ ಇಬ್ರಾಹಿಂ ಕುರಿತ ವೆಬ್ ಸಿರೀಸ್ ನಿರ್ವಣಕ್ಕೆ ತಯಾರಿ ನಡೆಸಿದ್ದು, ಅಂಡರ್ವರ್ಲ್ಡ್ನ ಕರಾಳ ಮುಖವನ್ನು ಅನಾವರಣ ಮಾಡಲಿದ್ದಾರಂತೆ. 1980ರಿಂದ 1993ರ ಅವಧಿಯಲ್ಲಿ ದಾವೂದ್ ಇಬ್ರಾಹಿಂ ಮಾಡಿರುವ ಸ್ಪೋಟ, ದಾಳಿಗಳ ಕುರಿತು ಈ ವೆಬ್ಸಿರೀಸ್ ನಿರ್ವಣವಾಗಲಿದೆ. ಮುಖ್ಯಪಾತ್ರಧಾರಿ ಯಾರು? ಯಾವಾಗ ಚಿತ್ರೀಕರಣ ಶುರು ಎಂಬಿತ್ಯಾದಿ ಅಂಶಗಳನ್ನು ಮುಂದಿನ ದಿನಗಳಲ್ಲಿ ಒಂದೊಂದಾಗಿ ಹೇಳಲಿದ್ದಾರಂತೆ ಆರ್ಜಿವಿ. (ಏಜೆನ್ಸೀಸ್)