

ಮುಂಬೈ: ಸದಾ ಏನಾದರೊಂದು ವಿಷಯದ ಮೂಲಕ ಸುದ್ದಿಯಲ್ಲಿರುವ ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಇಂದು ತಮ್ಮ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು.
ನಗು ಇರುವ ತಮ್ಮದೇ ಬ್ಲೋಅಪ್ ಫೋಟೋ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ರಾಮ್ಗೋಪಾಲ್ ವರ್ಮಾ, ಈ ಎಕ್ಸ್ಪ್ರೆಷನ್ಗೆ ಕಾರಣವೇನು? ಎಂದು ಹೇಳಿದವರಿಗೆ 1 ಲಕ್ಷ ರೂಪಾಯಿ ಬಹುಮಾನವಾಗಿ ನೀಡುವುದಾಗಿ ಗಡುವನ್ನೂ ಘೋಷಿಸಿದ್ದರು. ಆದರೆ ಅವರು ನೀಡಿದ್ದ ನಿಗದಿತ ಸಮಯದೊಳಗೆ ಯಾರೂ ಅದನ್ನು ತಿಳಿಸಿಲ್ಲ.
ಕೊನೆಗೂ ತಮ್ಮ ಆ ಚಿತ್ರದಲ್ಲಿನ ಎಕ್ಸ್ಪ್ರೆಷನ್ಗೆ ಕಾರಣವೇನು ಎಂಬುದನ್ನು ರಾಮ್ಗೋಪಾಲ್ ವರ್ಮಾ ಪೂರ್ತಿ ಫೋಟೋ ಹಂಚಿಕೊಳ್ಳುವ ಮೂಲಕ ರಹಸ್ಯ ಬಹಿರಂಗಗೊಳಿಸಿದ್ದಾರೆ. ಅವರ ನಿರ್ದೇಶನದ ಡೇಂಜರಸ್ ಸಿನಿಮಾದ ನಾಯಕಿಯರೇ ಈ ಎಕ್ಸ್ಪ್ರೆಷನ್ಗೆ ಕಾರಣ ಎನ್ನುವ ಜತೆಗೆ ಆ ಫೋಟೋ ಕೂಡ ಆರ್ಜಿವಿ ಹಂಚಿಕೊಂಡಿದ್ದಾರೆ.