

Murder Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ2 ಆರೋಪಿ ನಟ ದರ್ಶನ್ಗೆ ಜೈಲಿನಲ್ಲಿ ಬೆಡ್ಶಿಟ್, ದಿಂಬು ಮೆನೆ ಊಟಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ(ಸೆ.3ರಂದು) ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯ ಸೆ.9ಕ್ಕೆ ಆದೇಶ ಕಾಯ್ದಿರಿಸಿದೆ.
ಸುಪ್ರೀಂಕೋರ್ಟ್ನಲ್ಲಿ ಜಾಮೀನು ವಜಾ ಆದ ಬೆನ್ನಲ್ಲೆ ಹೊರಗಿದ್ದ 7 ಆರೋಪಿಗಳು ಇದೇ ಆಗಷ್ಟ್ನಲ್ಲಿ ಪರಪ್ಪನ ಆಗ್ರಹಾರ ಸೇರಿದ್ದಾರೆ. ಇದೀಗ ಜೈಲಿನಲ್ಲಿ ದರ್ಶನ್ಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆರೋಪಿ ಪರ ಅರ್ಜಿ ಸಲ್ಲಿದ್ದ ವಕೀಲ ಸುನೀಲ್ ಕುಮಾರ್ ವಾದ ಮಂಡನೆ ಮಾಡಿದ್ದಾರೆ.
ಇನ್ನು ಇದರ ಜತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಕೋರಿದ್ದಾರೆ. ಇದೀಗ ಸೆಷನ್ಸ್ ನ್ಯಾಯಾಲಯ ಸೆ.9ಕ್ಕೆ ಆದೇಶ ಕಾಯ್ದಿರಿಸಿದೆ.