ಯುವರತ್ನನಿಗೆ ಸೈಮಾ ಅಪ್ಪುಗೆ!

Appu 1
Published on

ಬೆಂಗಳೂರು: 10ನೇ ಸೈಮಾ (ಸೌತ್ ಇಂಡಿಯಾ ಇಂಟರ್​ನ್ಯಾಷನಲ್ ಮೂವಿ ಅವಾರ್ಡ್ಸ್) ಪ್ರಶಸ್ತಿ ಪ್ರದಾನ ಸಮಾರಂಭ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಿತು. ನಟ ಪುನೀತ್ ರಾಜ್​ಕುಮಾರ್ ಅವರ ಸ್ಮರಣಾರ್ಥ ಕರ್ನಾಟಕದಲ್ಲಿ ಪ್ರಶಸ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶನಿವಾರ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್​ನ ತಾರೆಯರೂ ಭಾಗಿಯಾಗಿದ್ದು ವಿಶೇಷ.

‘ಯುವರತ್ನ’ ಚಿತ್ರದ ಅಭಿನಯಕ್ಕೆ ಪುನೀತ್ ರಾಜ್​ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಲಾಯಿತು. ಅವರ ಪರವಾಗಿ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಆ ಪ್ರಶಸ್ತಿ ಪಡೆದಿದ್ದು ಗಮನ ಸೆಳೆಯಿತು. ನಟಿ ಆಶಿಕಾ ರಂಗನಾಥ್ ಅವರಿಗೆ ‘ಮದಗಜ’ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ, ‘ರಾಬರ್ಟ್’ ಚಿತ್ರಕ್ಕಾಗಿ ತರುಣ್ ಸುಧೀರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಯಿತು. ಧನಂಜಯ, ಅಮೃತಾ ಅಯ್ಯಂಗಾರ್, ನಾಗಭೂಷಣ್, ಪ್ರಮೋದ್, ಪ್ರಮೋದ್ ಶೆಟ್ಟಿ, ಆರೋಹಿ ನಾರಾಯಣ್, ಚಿಕ್ಕಣ್ಣ, ಶಂಕರ್ ಗುರು ಸೇರಿದಂತೆ ಇನ್ನೂ ಹಲವರು ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಪಡೆದರು.

ಇನ್ನು, ತೆಲುಗು ವಿಭಾಗದಲ್ಲಿ ‘ಪುಷ್ಪ ದಿ ರೈಸ್’ ಅತ್ಯುತ್ತಮ ಚಿತ್ರ, ಅದರಲ್ಲಿ ಅಭಿನಯಕ್ಕಾಗಿ ಅಲ್ಲು ಅರ್ಜುನ್​ಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಯಶ್, ಕಮಲ್ ಹಾಸನ್, ವಿಜಯ್ ದೇವರಕೊಂಡ, ರಣವೀರ್ ಸಿಂಗ್, ಪೂಜಾ ಹೆಗ್ಡೆ ಸೇರಿದಂತೆ ಹಲವು ತಾರೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net