

ಬಾಲಿವುಡ್ ಹಿರಿಯ ನಟಿ ರೇಖಾ ಅವರ ಮುಂಬೈನಲ್ಲಿರುವ ಬಂಗಲೆ ಸೀಲ್ಡೌನ್ ಆಗಿದೆ. ಅವರ ನಿವಾಸ ಇರುವ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಗುರುತಿಸಿದೆ.
ರೇಖಾ ಅವರ ಬಂಗಲೆಯಲ್ಲಿ ಕೆಲಸ ಮಾಡುತ್ತಿರುವ ಸೆಕ್ಯುರಿಟಿ ಗಾರ್ಡ್ ಓರ್ವರಲ್ಲಿ ಕರೊನಾ ದೃಢಪಟ್ಟ ಬಳಿಕ ಇಡೀ ಬಂಗಲೆಯನ್ನೇ ಸೀಲ್ಡೌನ್ ಮಾಡಲಾಗಿದೆ.
ಮಹಾರಾಷ್ಟ್ರ, ಮುಂಬೈನಲ್ಲಿ ಕರೊನಾ ಸಿಕ್ಕಾಪಟೆ ಹೆಚ್ಚುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳ ಮನೆಗೂ ಕಾಲಿಟ್ಟಿದೆ. ಕಳೆದ ವಾರ ಅಮಿರ್ ಖಾನ್, ಕರಣ್ ಜೋಹರ್ ಮತ್ತು ಬೋನಿ ಕಪೂರ್ ಅವರ ಮನೆಯ ಕೆಲಸದವರಲ್ಲಿ ಕರೊನಾ ಕಾಣಿಸಿಕೊಂಡಿತ್ತು.
ಇಂದು ಹಿರಿಯ ನಟ ಅಮಿತಾಭ್ ಬಚ್ಚನ್ ಅವರಲ್ಲಿ ಕೊವಿಡ್-19 ದೃಢಪಟ್ಟಿದೆ.
ನಟಿ ರೇಖಾ ಅವರ ಬಂಗಲೆಯಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳಿದ್ದು, ಅವರಲ್ಲಿ ಒಬ್ಬರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಬಿಎಂಸಿ ತಿಳಿಸಿದೆ. ಬಂಗಲೆಯ ಗೇಟ್ ಮುಚ್ಚಲಾಗಿದ್ದು, ಅಲ್ಲಿನ ಆವರಣವನ್ನು ಸ್ಯಾನಿಟೈಸ್ ಮಾಡಲಾಗಿದೆ. (ಏಜೆನ್ಸೀಸ್)