'ಪ್ರಾಜೆಕ್ಟ್ ಇಷ್ಟವಾಗದಿದ್ರೆ ಹೊರನಡೆಯಿರಿ, ದಕ್ಷಿಣ-ಉತ್ತರ ಸಿನಿಮಾ ರಂಗದ ಮಧ್ಯೆ ಕಂದಕ ಸೃಷ್ಟಿಸ್ಬೇಡಿ'; ನಟಿ ರೆಜಿನಾ

'ಪ್ರಾಜೆಕ್ಟ್ ಇಷ್ಟವಾಗದಿದ್ರೆ ಹೊರನಡೆಯಿರಿ, ದಕ್ಷಿಣ-ಉತ್ತರ ಸಿನಿಮಾ ರಂಗದ ಮಧ್ಯೆ ಕಂದಕ ಸೃಷ್ಟಿಸ್ಬೇಡಿ'; ನಟಿ ರೆಜಿನಾ
Published on: 
  • ಸಿನಿಮಾ ಪ್ರಾಜೆಕ್ಟ್ ಇಷ್ಟವಾಗದಿದ್ದರೆ..ಹೊರಬನ್ನಿ ಆ ಸ್ವಾತಂತ್ರ್ಯ ನಿಮಗಿದೆ ಎಂದ ರೆಜಿನಾ.

  • ದಕ್ಷಿಣ ಮತ್ತು ಉತ್ತರ ಸಿನಿಮಾ ರಂಗದ ವಿರುದ್ಧ ಭಿನ್ನಾಭಿಪ್ರಾಯ ಸೃಷ್ಟಿಸುವುದನ್ನು ಸಹಿಸಲ್ಲ.

  • ನಟಿಯರು ತಮಗಾದ ಅಹಿತಕರ ಅನುಭವ ಬಗ್ಗೆ ಮಾತನಾಡಬೇಕು ಎಂದು ರಾಧಿಕಾ ಆಪ್ಟೆ, ಜಾನ್ವಿ ಕಪೂರ್​ಗೆ ಪರೋಕ್ಷವಾಗಿ ಟಾಂಗ್.

Regina Cassandra On Janhvi, Radhika Apte: ಸಿನಿಮಾ ಪ್ರಾಜೆಕ್ಟ್ ಇಷ್ಟವಾಗದಿದ್ದರೆ ಹೊರಬನ್ನಿ. ಆಯ್ಕೆ ನಿಮ್ಮದು. ಬೇಕಿದ್ದರೆ ಸಿನಿಮಾದಿಂದ ಹೊರಬಂದ ಬಗ್ಗೆ ಸುದ್ದಿಯಾಗುವಂತೆ ಮಾಡಿ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಿನಿಮಾ ರಂಗದ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಬೇಡಿ ಎಂದು ಮೂಕುತಿ ಅಮ್ಮನ್ ಪ್ರಚಾರದ ವೇಳೆ ನಟಿ ರೆಜಿನಾ ಕಸ್ಸಂದ್ರ ಹೇಳಿದರು. ಇತ್ತೀಚೆಗೆ ರಾಧಿಕಾ ಆಪ್ಟೆ ಮತ್ತು ಜಾನ್ವಿ ಕಪೂರ್​ ಅವರು ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯದ ವಿರುದ್ಧ ರೆಜಿನಾ ಮಾತನಾಡಿದ್ದು ಹೀಗೆ.

ಏನಂದಿದ್ರು ಜಾನ್ವಿ?

‘ಕಾಫಿ ವಿತ್ ಕರಣ್ 9’ ಕಾರ್ಯಕ್ರಮದಲ್ಲಿ ವರುಣ್ ಧವನ್ ಜತೆಗೆ ಪಾಲ್ಗೊಂಡಿದ್ದ ಜಾನ್ವಿ ಕಪೂರ್, ಪೆದ್ದಿ ಸಿನಿಮಾ ವಿಚಾರವಾಗಿ ನಾನು ಪ್ರಶ್ನೆ ಮಾಡಬೇಕಿತ್ತು. ಆ ಅಧಿಕಾರ ನನಗಿತ್ತು. ನನ್ನ ತಪ್ಪಿನ ಬಗ್ಗೆ ಇಂದಿಗೂ ಗಿಲ್ಟ್ ಇದೆ, ಆದರೆ, ಇದು ನನ್ನೊಬ್ಬಳ ತಪ್ಪಲ್ಲ. ದಕ್ಷಿಣ ಭಾರತದಲ್ಲಿ ಫುಲ್ ಬೌಂಡ್ ಸಿನಿಮಾ ಸ್ಕ್ರಿಪ್ಟ್​ಗಳು ಸಿಗುವುದು ತೀರ ಕಡಿಮೆ ಆಗ ನಿರ್ದೇಶಕರು ಹೇಳಿದಂತೆ ಕೇಳಬೇಕು ಎಂದು ಹೇಳಿಕೆ ಕೊಟ್ಟಿದ್ದರು.

ರಾಧಿಕಾ ಆಪ್ಟೆ ಹೀಗಂದಿದ್ರು!

ತೆಲುಗು ಸಿನಿಮಾವೊಂದರಲ್ಲಿ ತಾಯಿಯ ಸೋದರಮಾವನನ್ನು (ಮಾವ) ಮದುವೆಯಾಗುವ ಪಾತ್ರವನ್ನು ನಿರ್ವಹಿಸಲು ಸೂಚಿಸಲಾಗಿತ್ತು. ಆ ಅನುಭವವು ಅತ್ಯಂತ ಅಸಹನೀಯವಾಗಿತ್ತು ಎಂದಿದ್ದರು.(2014ರ ಬೋಯಪಾಟಿ ಶ್ರೀನು ನಿರ್ದೇಶನದ ‘ಲೆಜೆಂಡ್’ ಚಿತ್ರದ ಬಗ್ಗೆ ಎಂದು ಪ್ರೇಕ್ಷಕರು ಊಹಿಸಿದ್ದರು) ಇಷ್ಟೇ ಅಲ್ಲದೇ ಅವರಿಗೆ ಪ್ರಬಲ ನಟನಿಂದಾದ ಇರಿಟೇಶನ್​ ಬಗ್ಗೆಯೂ ಮಾತನಾಡಿದ್ದರು.

ಸಿನಿಮಾದಿಂದ ಹೊರ ಬಂದು ಸುದ್ದಿಯಾಗಿ

ಈ ಬಗ್ಗೆ ಮೂಕುತಿ ಅಮ್ಮನ್ ಪ್ರಚಾರದಲ್ಲಿದ್ದ ರೆಜಿನಾ ಮುಂದೆ ನಿರೂಪಕಿಯೊಬ್ಬರು ಪ್ರಶ್ನೆ ಇಟ್ಟರು, ಸಿನಿಮಾ ಪ್ರಾಜೆಕ್ಟ್ ಇಷ್ಟವಿಲ್ಲದಿದ್ದರೆ, ಸುಮ್ಮನೆ ಅದರಿಂದ ಹೊರಬನ್ನಿ. ಸಿನಿಮಾ ಬಿಟ್ಟಿದ್ದು ಯಾಕೆ ಎನ್ನುವ ಬಗ್ಗೆ ಸುದ್ದಿಯನ್ನು ಹರಡಿ; ಆದರೆ, ನಂತರದ ದಿನಗಳಲ್ಲಿ ಈ ವಿಷಯದ ಬಗ್ಗೆ ಮಾತನಾಡಿ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ದ್ವೇಷವನ್ನು ಹುಟ್ಟುಹಾಕಬೇಡಿ.

ನಾನು ಸಪೋರ್ಟ್ ಮಾಡಲ್ಲ

ಜಾಹ್ನವಿ ಮತ್ತು ರಾಧಿಕಾ ಇಬ್ಬರಿಗೂ ಈ ಸಿನಿಮಾದಿಂದ ಸುಲಭವಾಗಿ ಹೊರಬರುವ ಸ್ವಾತಂತ್ರ್ಯವಿತ್ತು. ನಾನೂ ಒಬ್ಬ ಮಹಿಳೆಯಾಗಿರುವುದರಿಂದ ಮಹಿಳೆಯರ ಪರವಾಗಿ ನಿಲ್ಲುವುದು ನನಗೆ ಸುಲಭವೇ, ಆದರೆ ಈ ವಿಷಯದಲ್ಲಿ ನಾನು ಅವರ ಪರವಾಗಿ ನಿಲ್ಲಲಾರೆ. ಸಮಸ್ಯೆಯನ್ನು ನಿಭಾಯಿಸಲು ಇದೊಂದು ಸರಿಯಾದ ಮಾರ್ಗ ಎಂದು ನನಗೆ ಅನ್ನಿಸುತ್ತಿಲ್ಲ. ಇದನ್ನು ನಿರ್ವಹಿಸಲು ಇನ್ನೂ ಅನೇಕ ಉತ್ತಮ ಮಾರ್ಗಗಳಿವೆ. ಅಹಿತಕರ ವಾತಾವರಣದಲ್ಲಿ ನಟಿಸಿ, ಸಿನಿಮಾ ಬಿಡುಗಡೆಯಾದ ನಂತರ ಈ ಬಗ್ಗೆ ದೂರು ನೀಡುವುದು ಸರಿಯಾದ ಕ್ರಮವಲ್ಲ.

ಧರ್ಮ ಪ್ರೊಡಕ್ಷನ್ಸ್ ಬಗ್ಗೆ ರೆಜಿನಾ ಆರೋಪ

‘ಕೇಸರಿ ಚಾಪ್ಟರ್ 2’ ಸಿನಿಮಾದಲ್ಲಿ ನಾನು ಅಕ್ಷಯ್ ಕುಮಾರ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದೆ. ಧರ್ಮ ಪ್ರೊಡಕ್ಷನ್ಸ್ ನನ್ನನ್ನು ಪ್ರಚಾರ ಕಾರ್ಯದಿಂದ ಸಂಪೂರ್ಣವಾಗಿ ಕಡೆಗಣಿಸಿತ್ತು. ಇದಕ್ಕೆ ನಾನು ದಕ್ಷಿಣ ಭಾರತದ ನಟಿ ಎನ್ನುವುದು ಕಾರಣವೇ? ಇಂದಿಗೂ ನನ್ನ ಹೆಸರನ್ನು ಪ್ರಚಾರದಲ್ಲಿ ಏಕೆ ಸೇರಿಸಲಿಲ್ಲ ಎಂಬುದು ನನಗೆ ತಿಳಿದಿಲ್ಲ ಎಂದರು ರೆಜಿನಾ.

ಒಟ್ಟಾರೆಯಾಗಿ ದಕ್ಷಿಣ ಭಾರತದ ಸಿನಿಮಾ ರಂಗದ ಸ್ಕ್ರಿಪ್ಟ್, ಸ್ಟಾರ್​ ನಟರ ಆಯ್ಕೆ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು, ಎಲ್ಲಿಗೆ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).