ಪ್ರಭಾಸ್​ಗೆ ಇಂಥಹದ್ದೊಂದು ಸಮಸ್ಯೆ ಇದ್ಯಾ?! ​ ಮದುವೆಯಾಗದೇ ಇರುವ ನಿರ್ಧಾರ ಮಾಡಿದ್ದು ಇದೇ ಕಾರಣಕ್ಕೆ, ಬಯಲಾಯ್ತು ಶಾಕಿಂಗ್​​ ಸತ್ಯ..! |Prabhas Marriage

pfinal
Published on

ಬಾಹುಬಲಿ ಟನ ಪ್ರಭಾಸ್ ಅವರ ಮದುವೆ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಇದೆ. ಅವರ ಸಿನಿಮಾಗಳಿಗಾಗಿ ಕಾಯುತ್ತಿದ್ದ ಜನ ಈಗ ಅವರ ಮದುವೆಯಾಗಿ ಕಾಯುತ್ತಿದ್ದಾರೆ. ಕಾರಣ ಈ ಸೂಪರ್​ಸ್ಟಾರ್ ನಟನಿಗೆ ವಯಸ್ಸು ಹೆಚ್ಚುತ್ತಲೇ ಇದೆ. ಆದರೆ ಪ್ರಭಾಸ್ ಮದುವೆ ಯೋಚನೆಯನ್ನೇ ಮಾಡುತ್ತಿಲ್ಲ. ಹಾಗಾಗಿ ಈ ಕುರಿತು ಸಿನಿ ಪ್ರೇಮಿಗಳಲ್ಲಿ ಕುತೂಹಲವಿದೆ.

ಈ ಹಿಂದೆ ನಟ ಹಾಗೂ ಅನುಷ್ಕಾ ಶೆಟ್ಟಿ ಅವರು ಮದುವೆಯಾದಂತಹ AI ಫೋಟೋಗಳು ವೈರಲ್ ಆಗಿದ್ದವು. ಇವರಿಬ್ಬರೂ ಬಾಹುಬಲಿಯ ಮೂಲಕ ದಕ್ಷಿಣದ ಫೇಮಸ್ ಆನ್​ಸ್​ಕ್ರೀನ್ ಜೋಡಿಯಾಗಿ ಹೊರಹೊಮ್ಮಿದರು. ಹಾಗಾಗಿ ಇವರು ನಿಜ ಜೀವನದಲ್ಲಿ ಒಂದಾಗಲಿ ಎನ್ನುವುದು ಸಿನಿಮಾ ಪ್ರೇಮಿಗಳ ಆಸೆಯಾಗಿದೆ.

ಆನ್​ಸ್ಕ್ರೀನ್​ನಲ್ಲಿ ಇವರ ಮದುವೆಯಾಗಿದ್ದರೂ ಕೂಡಾ ಇವರು ರಿಯಲ್ ಲೈಫ್​ನಲ್ಲಿ ಮದುವೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಿಶೇಷವಾಗಿ ತೆಲುಗು ನಟರು ಯಾವುದೇ ಕಾರಣಕ್ಕೂ ಬೇರೆ ರಾಜ್ಯದ ನಟಿಯರು, ಬೇರೆ ಸಮುದಾಯದವರನ್ನು ಮದುವೆಯಾಗುವುದು ತೀರಾ ಕಡಿಮೆ. ಬದಲಾಗಿ ಉದ್ಯಮಿ ಮಗಳನ್ನೋ, ಕುಟುಂಬ ಸಂಬಂಧಿಯನ್ನೋ ವರಿಸುತ್ತಾರೆ.ಅಭಿಮಾನಿಗಳು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗಬೇಕೆಂದು ಬಯಸಿದರೂ ಕೂಡಾ ಅವರಿಬ್ಬರು ಮದುವೆಯಾಗುವ ಸೂಚನೆ ಇಲ್ಲ.

ಆದರೆ ಎಲ್ಲರಿಗೂ ಇರುವ ಆತಂಖ ಏನು ಅಂದ್ರೆ ನಟ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬುದು. ಅದಕ್ಕೆ ಒಂದು ಕಾರಣ ಇದೆ!

ನಟ ಪ್ರಭಾಸ್‌ ಮದುವೆಯಾಗೆ ಉಳಿಯಲು ಕಾರಣ ಒಬ್ಬರು ನಟಿ, ಪ್ರಭಾಸ್‌ ಅವರು ಒಬ್ಬ ನಟಿಯನ್ನು ಪ್ರೀತಿಸುತ್ತಿದ್ದು, ಇಬ್ಬರು ಜಾತಕದಲ್ಲಿ ಹೊಂದಾಣಿಕೆ ಇಲ್ಲದ ಕಾರಣದಿಂದಾಗಿ ನಟ ಮದುವೆಯಾಗುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಇದೀಗ ಕೇಳಿ ಬರುತ್ತಿದೆ. ಈ ಕುರಿತಾಗಿ ಅಲ್ಲದೆ ಮದುವೆಯ ಕುರಿತಾಗಿ ಪ್ರಭಾಸ್‌ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದೆ ನಟ ಮದುವೆಯಾಗುವ ನಿರ್ಧಾರ ಮಾಡುತ್ತಾರ ಅಥವಾ ಇಲ್ವಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net