

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್ 4 ರಿಯಾಲಿಟಿ ಶೋದ ವಿನ್ನರ್ ಮೆಬಿನಾ ಮೈಕಲ್ (22) ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೇ. 26ರಂದು ಚೆನ್ನರಾಯಪಟ್ಟಣದ ಬೆಳ್ಳೂರು ಬಳಿ ಮೆಬಿನಾ ಇದ್ದ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ್ದರ ಪರಿಣಾಮ ಮೆಬಿನಾ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರನ್ನು ನಾಗಮಂಗಲದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ರಾಗಿಣಿ ಹುಟ್ಟುಹಬ್ಬದ ಸ್ಪೆಷಾಲಿಟಿ ಇದು …
ಅಂದಹಾಗೆ, ಮಂಗಳವಾರ ಸಂಜೆ ಹುಟ್ಟೂರು ಕೊಡಗಿನ ಸೋಮವಾರಪೇಟೆಯ ತಾಲೂಕಿನ ಐಗೂರು ಗ್ರಾಮದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಮೆಬಿನಾ ಸಾವಿನ ಬಗ್ಗೆ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋದ ನಿರೂಪಕ ಅಕುಲ್ ಬಾಲಾಜಿ ಟ್ವಿಟರ್ ಪೋಸ್ಟ್ನಲ್ಲಿ ಮೆಬಿನಾ ಬಗ್ಗೆ ಸಂತಾಪ ಸೂಚಿಸಿ ಟ್ವಿಟ್ ಮಾಡಿದ್ದಾರೆ. ‘ನಿಜಕ್ಕೂ ಇದು ಶಾಕಿಂಗ್ ಸುದ್ದಿ. ಮೆಬಿನಾ ನನ್ನ ಫೇವರಿಟ್ ಸ್ಫರ್ಧಿ. ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಹುತೇಕ ಕಾರ್ಯಕ್ರಮಗಳು ಮರುಪ್ರಸಾರ ಆರಂಭಿಸಿವೆ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್-4 ಸಹ ಶುರುವಾಗಿದೆ