ಶಿವಾರ್ಜುನ ಸೇರಿ ಇಂದು 4 ಚಿತ್ರಗಳ ಮರುಬಿಡುಗಡೆ

p4shivarjuna2
Published on

ಬೆಂಗಳೂರು: ಅ. 15ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭಿಸುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಗುರುವಾರ ಮೂರು ಕನ್ನಡ ಚಿತ್ರಗಳು ಮರುಬಿಡುಗಡೆ ಆಗಿವೆ. ಇಂದು ಇನ್ನೂ ನಾಲ್ಕು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಗುರುವಾರ ‘ಲವ್ ಮಾಕ್​ಟೇಲ್’, ‘ಶಿವಾಜಿ ಸುರತ್ಕಲ್’ ಮತ್ತು ‘ಕಾಣದಂತೆ ಮಾಯವಾದನು’ ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನು ರಾಜ್ಯದ ಹಲವು ಚಿತ್ರಮಂದಿರ ಗಳಲ್ಲಿ ‘ಶಿವಾರ್ಜುನ’, ‘ಥರ್ಡ್ ಕ್ಲಾಸ್’, ‘ಐದಡಿ ಏಳು ಅಂಗುಲ’ ಮತ್ತು ಮಾಯಾಬಜಾರ್’ ಚಿತ್ರಗಳು ಮರುಬಿಡುಗಡೆಯಾಗಲಿವೆ.

ಈ ಪೈಕಿ, ‘ಮಾಯಾಬಜಾರ್’ ಮತ್ತು ‘ಥರ್ಡ್ ಕ್ಲಾಸ್’ ಚಿತ್ರಗಳು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾದರೆ, ‘ಶಿವಾರ್ಜುನ’ ಚಿತ್ರವು ಸಂತೋಷ್ ಥಿಯೇಟರ್​ನಲ್ಲಿ ಬಿಡುಗಡೆಯಾಗಲಿದೆ. ಇನ್ನು ‘ಥರ್ಡ್ ಕ್ಲಾಸ್’ ಚಿತ್ರಕ್ಕೆ ಭೂಮಿಕಾ ಮುಖ್ಯ ಚಿತ್ರಮಂದಿರವಾಗಲಿದೆ. ಈ ಎಲ್ಲ ಚಿತ್ರಗಳು, ಇನ್ನಿತರ ನಗರಗಳ ಏಕಪರದೆಯ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆಯಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net