ಮತ್ತೆ ಜತೆಯಾದ ರವಿಚಂದ್ರನ್-ಖುಷ್ಬೂ

Ravichandran
Published on

ಈ ಚಿತ್ರದ ಇನ್ನೊಂದು ವಿಶೇಷತೆಯೆಂದರೆ, ರವಿಚಂದ್ರನ್ ಮತ್ತು ಖುಷ್ಬೂ ಬಹಳ ವರ್ಷಗಳ ನಂತರ ಜತೆಯಾಗಿ ನಟಿಸುತ್ತಿದ್ದಾರೆ. ಖುಷ್ಬೂ ಅವರನ್ನು ‘ರಣಧೀರ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದೇ ರವಿಚಂದ್ರನ್. ಆ ನಂತರ ಇಬ್ಬರೂ ‘ಯುಗಪುರುಷ’, ‘ಅಂಜದ ಗಂಡು’ ಮತ್ತು ‘ಶಾಂತಿ ಕ್ರಾಂತಿ’ ಚಿತ್ರಗಳಲ್ಲಿ ನಟಿಸಿದ್ದರು.

‘ಶಾಂತಿ ಕ್ರಾಂತಿ’ ನಂತರ ಇಬ್ಬರೂ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಕೆಲವು ವರ್ಷಗಳ ಹಿಂದೆ ಕಿರುತೆರೆಯ ಒಂದು ಕಾರ್ಯಕ್ರಮದಲ್ಲಿ ಇಬ್ಬರೂ ಜತೆಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರವಿಚಂದ್ರನ್ ಜತೆಗೆ ನಟಿಸುವ ಆಸೆ ಇದೆ ಎಂದು ಖುಷ್ಬೂ ಹೇಳಿ ಕೊಂಡಿದ್ದರು. ಅಂಥದ್ದೊಂದು ಅವಕಾಶ, ಈಗ ಕಿರೀಟಿ ಚಿತ್ರದಲ್ಲಿ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net