ಅಂದೊಂದಿತ್ತು ಕಾಲದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್

Ravichandran
Published on

ಬೆಂಗಳೂರು: ವಿನಯ್ ರಾಜಕುಮಾರ್ ನಟಿಸುತ್ತಿರುವ ‘ಅಂದೊಂದಿತ್ತು ಕಾಲ’ ಚಿತ್ರಕ್ಕೀಗ ‘ಕ್ರೇಜಿ ಸ್ಟಾರ್’ ಎಂಟ್ರಿಯಾಗಿದೆ. ಇಡೀ ಚಿತ್ರದಲ್ಲಿಯೂ ಅವರು ರವಿಚಂದ್ರನ್ ಆಗಿಯೇ ಮುಂದುವರಿಯಲಿರುವುದು ವಿಶೇಷ. ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಮೂರು ಕಾಲಘಟ್ಟದಲ್ಲಿ ನಡೆಯಲಿದೆ. ವಿನಯ್ ಸಿನಿಮಾ ನಿರ್ದೇಶಕನ ಪಾತ್ರ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕೆಲಸ ಮುಗಿಸಿ, ಡಬ್ಬಿಂಗ್ ಮಾಡಿ, ರಿ-ರೆಕಾರ್ಡಿಂಗ್ ಹಂತದಲ್ಲಿದೆ ‘ಅಂದೊಂದಿತ್ತು ಕಾಲ’.

2002ರಲ್ಲಿನ ‘ಕೋದಂಡರಾಮ’ ಸಿನಿಮಾದಲ್ಲಿ ರವಿಚಂದ್ರನ್ ಮತ್ತು ಶಿವಣ್ಣ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಇದುವರೆಗೂ ರಾಜ್ ಕುಟುಂಬದವರ ಜತೆಗೆ ಅವರು ನಟಿಸಿರಲಿಲ್ಲ. ಇದೀಗ 20 ವರ್ಷದ ಬಳಿಕ ವಿನಯ್ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಕೀರ್ತಿ, ‘ನಿಜ ಜೀವನದಲ್ಲಿನ ನಟರಾಗಿಯೇ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ. ಏ. 5ರಿಂದ ಬೆಂಗಳೂರಿನಲ್ಲಿ ನಾಲ್ಕು ದಿನದ ಚಿತ್ರೀಕರಣ ನಡೆಯಲಿದೆ’ ಎಂದು ವಿವರಿಸುತ್ತಾರೆ.

ಭುವನ್ ಸಿನಿಮಾಸ್ ಬ್ಯಾನರ್​ನಲ್ಲಿ ಸುರೇಶ್ ಈ ಚಿತ್ರ ನಿರ್ವಿುಸುತ್ತಿದ್ದು, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ರಾಘವೇಂದ್ರ ವಿ. ಅವರ ಸಂಗೀತ, ಎ.ಆರ್. ಕೖಷ್ಣ ಸಂಕಲನವಿದೆ. ವಿನಯ್ಗೆ ಅದಿತಿ ಪ್ರಭುದೇವ ಜೋಡಿಯಾದರೆ, ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ನಿಶಾ, ಅರುಣಾ ಬಾಲರಾಜ್. ಮೋಹನ್ ಜನೇಜಾ ಸೇರಿ ಹಲವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net