ಡಿವೋರ್ಸ್​ ಸಿಗೋವರೆಗೂ ನಟಿಸಲ್ಲ, ಸಿನಿಮಾಗಳು ರಿಲೀಸ್​ ಆಗಲ್ಲ! ಕಣ್ಣೀರಿಡುತ್ತಲೇ ಶಾಕಿಂಗ್ ನಿರ್ಧಾರ ಕೈಗೊಂಡ ಜಯಂ ರವಿ

ನಟ ರವಿ ಮೋಹನ್​
ನಟ ರವಿ ಮೋಹನ್​
Published on

ಪ್ರಮುಖ ಮುಖ್ಯಾಂಶಗಳು

  • ತಮಿಳು ನಟರ ವಿರುದ್ಧ ಜಯಂ ರವಿ ಖ್ಯಾತಿಯ ನಟ ರವಿ ಮೋಹನ್ ದಾಂಪತ್ಯ ವಿವಾದ
  • ಪತ್ನಿ ಆರತಿ ಜೊತೆಗಿನ ಡಿವೋರ್ಸ್​ ಕೇಸ್​ ಕೋರ್ಟ್​ನಲ್ಲಿ
  • ಗಾಯಕಿ ಕೆನಿಶಾ ಜೊತೆಗಿದ್ದ ಕಾರಣಕ್ಕೆ ಜಯಂ ರವಿ ವಿರುದ್ಧ ಸಾಲು ಸಾಲು ಟೀಕೆ
  • ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಮಾಧ್ಯಮದ ಮುಂದೆ ಕಣ್ಣೀರಿಟ್ಟ ರವಿ
Ravi Mohan: ತಮಿಳು ಮಲಯಾಳಂ ಚಿತ್ರರಂಗದ ನಟ, ನಿರ್ಮಾಪಕ ರವಿ ಮೋಹನ್​ ಮತ್ತು ಆರತಿ ನಡುವಿನ ಡಿವೋರ್ಸ್​ ವಿವಾದ ಮತ್ತೊಮ್ಮೆ ಜೋರಾಗಿ ಸದ್ದು ಮಾಡುತ್ತಿದೆ. ಗಾಯಕಿ ಕೆನಿಶಾ ಫ್ರಾನ್ಸಿಸ್​ ಜೊತೆಗಿದ್ದ ಕಾರಣ, ರವಿ-ಆರತಿ ಮಧ್ಯೆ ದಾಂಪತ್ಯ ಒಡೆದಿದೆ ಎಂದು ನೆಟ್ಟಿಗರು ವಿಪರೀತವಾಗಿ ಜಾಲತಾಣಗಳಲ್ಲಿ ಟ್ರೋಲ್​ ಮಾಡಿದರು. ಇದರಿಂದ ತೀವ್ರ ಮನನೊಂದ ಕೆನಿಶಾ, ವಿಡಿಯೋಗಳ ಮೂಲಕ ನನ್ನನ್ನು ಬದುಕಲು ಬಿಡಿ ಎಂದಿದ್ದೇ ತಡ, ಜಯಂ ರವಿ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
ಪತ್ರಿಕಾಗೋಷ್ಠಿ ಕರೆದು ಮುಕ್ತವಾಗಿ ಮಾತನಾಡಿದ ರವಿ ಮೋಹನ್​, ಟೀಕೆಗಳು, ಆರೋಪಗಳಿಂದ ನೆಮ್ಮದಿಯಿಂದ ಕೆಲಸ ಮಾಡಲು ಆಗುತ್ತಿಲ್ಲ. ವರ್ಕ್​ ಮೇಲೆ ಫೋಕಸ್​ ಮಾಡುವುದು ಕಷ್ಟಕರವಾಗಿದೆ. ಎಷ್ಟೋ ಜನ ನನ್ನ ತುಂಬಾ ಕೆರಳಿಸುತ್ತಿದ್ದಾರೆ. ನಿಮ್ಮೆಲ್ಲರಿಗೂ ನಾನು ಒಂದು ಮಾತೇಳಲು ಬಯಸುವೆ. ಇದೇ ನನ್ನ ಆಫೀಸ್​. ಇಲ್ಲಿಗೆ ಬಂದು ಅದೇನು ಹೇಳುತ್ತಿರೋ ಹೇಳಿ. ಅದನ್ನು ಬಿಟ್ಟು ಎಲ್ಲಿಂದಲೋ ಕುಳಿತು ಮಾತನಾಡಬೇಡಿ. ನನ್ನ ಪತ್ನಿ ಆರತಿಯಿಂದ ಯಾವಾಗ ಡಿವೋರ್ಸ್​ ಸಿಗುತ್ತೋ, ಆಗಲೇ ನಾನು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದಿದ್ದಾರೆ.
ಕಳೆದ 23 ವರ್ಷಗಳಲ್ಲಿ ಪ್ರತಿದಿನ ಹಗಲು-ರಾತ್ರಿ ಕೆಲಸ ಮಾಡಿದ್ದೇನೆ. 95ರಷ್ಟು ನನ್ನ ಸಿನಿಮಾಗಳು ಯಶಸ್ವಿಯಾಗಿವೆ. ಕಷ್ಟಪಟ್ಟು ಇಷ್ಟೆಲ್ಲ ಸಂಪಾದಿಸಿದ್ದೇ ಆದರೂ ನಾನೇ ಖುದ್ದಾಗಿ ಇವುಗಳನ್ನು ಹೇಳಿಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ. ನೀವೆಲ್ಲರೂ (ಟೀಕಾಕಾರರು) ಸೇರಿ ಒಂದು ಹುಡುಗಿ (ಗಾಯಕಿ ಕೆನಿಶಾ) ನೆಮ್ಮದಿಯನ್ನು ಹಾಳು ಮಾಡಿದ್ದೀರಿ. ಇಂತಹ ವಿಷಯಗಳನ್ನು ಹೇಳಲು ಇಲ್ಲಿಯವರೆಗೆ ಪ್ರೆಸ್​ಮೀಟ್​ ಮಾಡಿರಲಿಲ್ಲ. ಆಕೆ ಮಾಡಿದ ತಪ್ಪಾದರು ಏನು? ಸುಖಾಸುಮ್ಮನೆ ಯಾರೋ ಒಬ್ಬರನ್ನು ಏಕೆ ಟಾರ್ಗೆಟ್​ ಮಾಡ್ತೀರಿ? ಎಂದು ತೀವ್ರ ಕಿಡಿಕಾರಿದ್ದಾರೆ.
ಆರತಿಯಿಂದ ವಿಚ್ಛೇದನ ಸಿಕ್ಕ ದಿನವೇ ಸೋಷಿಯಲ್​ ಮೀಡಿಯಾಗಳಲ್ಲಿನ ಬೆದರಿಕೆಗಳು ನಿಲ್ಲುತ್ತವೆ, ನನ್ನ ಜೀವನ ನೆಮ್ಮದಿಯತ್ತ ಸಾಗುತ್ತೆ, ಎಲ್ಲವೂ ಮುಗಿಯುತ್ತೆ. ಡಿವೋರ್ಸ್ ಸಿಗುವವರೆಗೂ ನಾನು ಯಾವುದೇ ಸಿನಿಮಾಗಳನ್ನು ಮಾಡೋದಿಲ್ಲ. ಈಗಾಗಲೇ ಪಡೆದುಕೊಂಡಿರುವ ಹಣವನ್ನು ವಾಪಾಸ್​ ಮಾಡುವೆ ಇಲ್ಲವೇ ಅದಕ್ಕೊಂದು ದಾರಿ ಮಾಡಿಕೊಡುವೆ. ಸುಮ್ಮನೆ ನನ್ನಿಂದ ಇನ್ನೊಬ್ಬರಿಗೆ ತೊಂದರೆ ಆಗುವ ರೀತಿ ನಡೆದುಕೊಳ್ಳುವುದಿಲ್ಲ ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

ಏನಿದು ವಿವಾದ?

ಅಂದಹಾಗೆ, 15 ವರ್ಷಗಳ ದಾಂಪತ್ಯದ ನಂತರ 2024ರಲ್ಲಿ ಜಯಂ ರವಿ, ಆರತಿ ಅವರಿಂದ ಬೇರ್ಪಟ್ಟರು. ನಂತರ, 2025ರಲ್ಲಿ, ಗಾಯಕಿ ಕೆನಿಷಾ ಫ್ರಾನ್ಸಿಸ್​ ಜೊತೆ ರವಿ ಅವರು ಮದುವೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡರು. ಆ ನಂತರ ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಡಿವೋರ್ಸ್ ಪ್ರಕರಣ ಕೋರ್ಟ್​ನಲ್ಲಿದ್ದರೂ ಇವರಿಬ್ಬರ ಸುತ್ತಾಟ, ನೋಡುಗರ ಕಣ್ಣಿಗೆ ಕೆಟ್ಟದಾಗಿ ಕಾಣಿಸಲು ಆರಂಭಿಸಿತು. ಕೆನಿಶಾ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೊರಿಸಿದ ಟೀಕಾಕಾರರು, ಅವರ ಕಣ್ಣೀರಿಗೆ ಕಾರಣರಾದರು. ಈ ವಿಚಾರಗಳಿಂದ ತೀರ ಮನನೊಂದ ರವಿ, ಈಗ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನೋವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net