ಕೆಜಿಎಫ್​ ಚಾಪ್ಟರ್​ 2ಗೆ ಮತ್ತೊಬ್ಬ ನಟಿಯ ಸೇರ್ಪಡೆ; ರಮೀಕಾ ಸೇನ್​ ಪಾತ್ರದಲ್ಲಿ ಮಸ್ತ್​ ಮಸ್ತ್​ ಹುಡುಗಿ ರವೀನಾ ಟಂಡನ್​ ನಟನೆ

KGF 2
Published on

ಬೆಂಗಳೂರು: ಮಸ್ತ್​ ಮಸ್ತ್​ ಹುಡುಗಿ ರವೀನಾ ಟಂಡನ್​ ಕೆಜಿಎಫ್​-2 ಚಿತ್ರದ ಮೂಲಕ ಮತ್ತೆ ಕನ್ನಡದ ಬೆಳ್ಳಿ ಪರದೆಗೆ ಆಗಮಿಸಿದ್ದಾರೆ.

ಬಹು ನೀರಿಕ್ಷಿತ ಚಿತ್ರ ಕೆಜಿಎಫ್​ ಭಾಗ 2ರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಚಿತ್ರದ ಭಾಗವಾಗಿ ಬಾಲಿವುಡ್​ ರವೀನಾ ಟಂಡನ್​ ನಟಿಸಲಿದ್ದಾರೆ ಎಂದು ನಿರ್ದೇಶಕ ಪ್ರಶಾಂತ್​ ನೀಲ್​ ಟ್ವೀಟ್​ ಮಾಡಿದ್ದಾರೆ.

"ಡೆತ್​ ವಾರಂಟ್​ ನೀಡುವ ಮಹಿಳೆ ಬಂದಾಯಿತು. ರವೀನಾ ಟಂಡನ್​ಗೆ ಸ್ವಾಗತ. ಕೆಜಿಎಫ್​ ಚಾಪ್ಟರ್​-2" ಎಂದು ಟ್ವೀಟ್​ನಲ್ಲಿ ಪ್ರಶಾಂತ್​ ನೀಲ್​ ಬರೆದುಕೊಂಡಿದ್ದಾರೆ.

ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಪ್ರಕಾರ ರವೀನಾ, ರಮೀಕಾ ಸೇನ್​ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಅಧೀರಾ ಎಂಬ ಪಾತ್ರದಲ್ಲಿ ನಟ ಸಂಜಯ್​ ದತ್ತ ಕೂಡ ಕೆಜಿಎಫ್​ 2ರಲ್ಲಿ ನಟಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಕೆಜಿಎಫ್​ -2 ಚಿತ್ರ ವಿವಿಧ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಇದು ಬಹು ಜನಪ್ರಿಯತೆ ಗಳಿಸಿದ್ದ ಕೆಜಿಎಫ್​ ಚಾಪ್ಟರ್​ 1ನ ಮುಂದುವರಿದ ಭಾಗವಾಗಿದ್ದು, ನಟ ಯಶ್​, ತಮನ್ನಾ ಭಾಟಿಯಾ ಮತ್ತು ಹಿರಿಯ ನಟ ಅನಂತ್​ನಾಗ್​ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net