ಆ ಸ್ಟಾರ್​ ನಟನೊಂದಿಗೆ ನಟಿಸಬೇಕೆಂಬುದೇ ನನ್ನ ಕನಸು! ರಾಶಿ ಖನ್ನಾ ಮಾತು ಕೇಳಿ ಫ್ಯಾನ್ಸ್​ ಖುಷ್​

Rashi Khanna
Published on

ಹೈದರಾಬಾದ್​: ಬಾಲಿವುಡ್​ನಲ್ಲಿ 2013ರಲ್ಲಿ ತೆರೆಕಂಡ ‘ಮದ್ರಾಸ್ ಕೆಫೆ’ ಚಿತ್ರದೊಂದಿಗೆ ಸಿನಿಮಾ ಕೆರಿಯರ್ ಆರಂಭಿಸಿದ್ದ ರಾಶಿ ಖನ್ನಾ, ಅದಾದ ಮೇಲೆ ದಕ್ಷಿಣದ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡರು. ಈಗಲೂ ತಮಿಳು ಮತ್ತು ತೆಲುಗಿನಲ್ಲಿ ರಾಶಿ ತುಂಬಾ ಬಿಜಿಯಾಗಿದ್ದಾರೆ. ಇದರ ನಡುವೆ ಹಿಂದಿಗೂ ಕಮ್​ ಬ್ಯಾಕ್​ ಮಾಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಕನ್ನಡದಲ್ಲಿ ನಟಿಸದಿದ್ದರೂ ಪ್ಯಾನ್​ ಇಂಡಿಯಾ ಪರಿಕಲ್ಪನೆಯಿಂದಾಗಿ ರಾಶಿ ಖನ್ನಾ ಮುಖ ಪರಿಚಯ ಕನ್ನಡಿಗರಿಗೂ ಇದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿರುವ ರಾಶಿ, ಆಗಾಗ ತಮ್ಮ ಮಾದಕ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕುತ್ತಿರುತ್ತಾರೆ.

ಇತ್ತೀಚೆಗೆ ಬಿಡುಗಡೆಯಾದ ರಾಶಿ ಖನ್ನಾ ಅಭಿನಯದ 'ಅರಣ್ಮನೈ 4' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ತಮನ್ನಾ ಸಹ ನಟಿಸಿದ್ದು, ಇಬ್ಬರು ಸೊಂಟ ಬಳಕಿಸಿರುವ ಅಚ್ಚು ಅಚ್ಚು ಅಚ್ಚಚ್ಚೋ ಹಾಡು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹಲ್​ಚಲ್​ ಎಬ್ಬಿಸಿತು. ಈಗಲೂ ಈ ಹಾಡು ಸದ್ದು ಮಾಡುತ್ತಲೇ ಇದೆ. ಪ್ರಸ್ತುತ ರಾಶಿ ಅವರು ಹಿಂದಿಯಲ್ಲಿ ದಿ ಸಬರಮತಿ ರಿಪೋರ್ಟ್​ ಮತ್ತು ತೆಲುಗಿನಲ್ಲಿ 'ತೆಲುಸು ಕದ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ತಾಜಾ ಸಂಗತಿ ಏನೆಂದರೆ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ರಾಶಿ, ತಮಗಿರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್ ಬಾಬು ಜೊತೆ ನಟಿಸುವ ಆಸೆಯನ್ನು ಹಲವು ಬಾರಿ ನಾನು ವ್ಯಕ್ತಪಡಿಸಿದ್ದೇನೆ. ಅದೇ ನನ್ನ ಕನಸು ಕೂಡ. ನಮ್ಮಿಬ್ಬರ ಕಾಂಬೋ ಚೆನ್ನಾಗಿರಲಿದೆ ಎಂದು ಭಾವಿಸಿದ್ದೇನೆ. ಮುಂದೆ ಪ್ರಭಾಸ್ ಜೊತೆಯೂ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.

ಸದ್ಯ ರಾಶಿ ಖನ್ನಾ ಅವರು ಮಾತುಗಳು ವೈರಲ್​ ಆಗುತ್ತಿವೆ. ಇದನ್ನು ನೋಡಿದ ಮಹೇಶ್​ ಬಾಬು ಅಭಿಮಾನಿಗಳು ಇಬ್ಬರು ಒಂದೇ ಚಿತ್ರದಲ್ಲಿ ನೋಡುವ ಆಸೆ ಇದೆ ಮತ್ತು ನಿಮ್ಮಿಬ್ಬರ ಕೆಮಿಸ್ಟ್ರಿ ಸಹ ಚೆನ್ನಾಗಿ ವರ್ಕ್​ ಆಗಲಿದೆ ಎಂದಿದ್ದಾರೆ. ಆದಷ್ಟು ಬೇಗ ನಿಮ್ಮ ಆಸೆ ಈಡೇರಲಿ ಎಂದು ರಾಶಿ ಖನ್ನಾ ಅಭಿಮಾನಿಗಳು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net