ದುಲ್ಖರ್ ಚಿತ್ರದಲ್ಲಿ ರಶ್ಮಿಕಾ ಅತಿಥಿ; ಮಲಯಾಳಂ ಹೀರೋ, ತೆಲುಗು ನಿರ್ದೇಶಕ, ಬಾಲಿವುಡ್ ನಟಿ

Rashmika
Published on

ಮಲಯಾಳಂ ಹೀರೋ, ತೆಲುಗು ನಿರ್ದೇಶಕ, ಬಾಲಿವುಡ್ ನಟಿ ಸೇರಿ ಒಂದು ಪ್ಯಾನ್ ಇಂಡಿಯಾ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಇದೀಗ ಕನ್ನಡತಿ ರಶ್ಮಿಕಾ ಸಹ ಆಯ್ಕೆಯಾಗಿದ್ದಾರೆ. ಹನು ರಾಘವಪುಡಿ ನಿರ್ದೇಶಿಸುತ್ತಿರುವ ಹೆಸರಿಡದ ಹೊಸ ಬಹುಭಾಷೆಯ ಚಿತ್ರದಲ್ಲಿ ರಶ್ಮಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಿರಿಯಡ್ ಡ್ರಾಮಾ ಶೈಲಿಯ ಈ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ವಿುಸುತ್ತಿದ್ದು, ಈಗಾಗಲೇ ಹೈದರಾಬಾದ್ ಮತ್ತು ಕಾಶ್ಮೀರದಲ್ಲಿ ಒಂದಷ್ಟು ಭಾಗದ ಚಿತ್ರೀಕರಣವನ್ನೂ ಚಿತ್ರತಂಡ ಮುಗಿಸಿದೆ.

ಇನ್ನೇನು ರಷ್ಯಾದಲ್ಲಿ ಮುಂದಿನ ಹಂತದ ಚಿತ್ರೀಕರಣ ಫಿಕ್ಸ್ ಆಗಿದ್ದು, ರಶ್ಮಿಕಾ ಮತ್ತು ದುಲ್ಖರ್ ಶೂಟಿಂಗ್​ನಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದೆಯೇ ಚಿತ್ರತಂಡ ರಶ್ಮಿಕಾ ಅವರನ್ನು ಸಂರ್ಪಸಿ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ನೀಡಿತ್ತು. ಆದರೆ, ಸಾಲುಸಾಲು ಸಿನಿಮಾ ಒಪ್ಪಿಕೊಂಡಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಒಪ್ಪಿದ ಚಿತ್ರಗಳನ್ನು ಮುಗಿಸಿರುವ ರಶ್ಮಿಕಾ, ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net