ಬಿಕಿನಿ ಹಾಕೊಂಡು... ರಶ್ಮಿಕಾ ಏನೇ ಮಾಡಿದ್ರೂ ಟ್ರೋಲ್​ ಆಗೋದು ತಪ್ಪಲ್ಲ ಅನ್ನೋದಕ್ಕೆ ಇಷ್ಟೇ ಸಾಕು!

ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮತ್ತೊಮ್ಮೆ ಟ್ರೋಲ್​
  • ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ ಟೀಕೆ ಮಾತ್ರ ತಪ್ಪದು
Rashmika Mandanna: ಕೊಡಗಿನ ಕುವರಿ, 'ನ್ಯಾಷನಲ್​ ಕ್ರಶ್​' ನಟಿ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಮೋಸ್ಟ್​ ಬಿಝಿಯೆಸ್ಟ್​ ಪ್ಯಾನ್ ಇಂಡಿಯನ್​ ನಟಿ ಆಗಿದ್ದಾರೆ. ಪ್ರಸ್ತುತ ಬಿಡುಗಡೆಗೆ ಸಿದ್ಧವಿರುವ ತಮ್ಮ ಮುಂದಿನ ಬಾಲಿವುಡ್​ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ತೊಡಗಿರುವ ರಶ್ಮಿಕಾಗೆ ಟ್ರೋಲ್​, ಟೀಕೆಗಳು ಏನೇ ಮಾಡಿದರೂ ತಪ್ಪೋದಿಲ್ಲ ಎನ್ನುವಂತಾಗಿದೆ.
ಸೋಷಿಯಲ್​ ಮೀಡಿಯಾದಲ್ಲಿ ಸದಾ ಟ್ರೋಲ್​, ಟೀಕೆಗಳಿಗೆ ಗುರಿಯಾಗುವ ರಶ್ಮಿಕಾ ಮಂದಣ್ಣ, ತಾವು ಏನೇ ಮಾತನಾಡಿದರೂ, ಹೇಗೇ ನಡೆದುಕೊಂಡರು ಅಥವಾ ಸಣ್ಣ ಮಿಸ್ಟೇಕ್​ ಮಾಡಿದರೂ ನೆಟ್ಟಿಗರ ಟೀಕೆಗಳಿಂದ ತಪ್ಪಿಸಿಕೊಳ್ಳಲು ಮಾತ್ರ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಇತ್ತೀಚಿನ ಘಟನೆ ಕೂಡ ಒಂದು ಬಲವಾದ ಉದಾಹರಣೆ ಎನ್ನಬಹುದು. ರಶ್ಮಿಕಾ, ಶಾಹೀದ್​ ಕಪೂರ್​ ಮತ್ತು ಕೃತಿ ಸನೋನ್​ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಕಾಕ್​ಟೇಲ್​ 2' ಚಿತ್ರದ ಪ್ರಚಾರದ ವೇಳೆ ನಟಿಯ ಒಂದು ಸಣ್ಣ ನಡೆ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ.
ಇದೇ ಜೂ.19ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿರುವ ಕಾಕ್​ಟೇಲ್ 2​ ಚಿತ್ರದ ಪ್ರಚಾರದ ಈವೆಂಟ್​ನಲ್ಲಿ ಭಾಗಿಯಾಗಿದ್ದ ವೇಳೆ ನಟ ಶಾಹೀದ್​ ತಲೆ ಮೇಲೆ ಕಲರ್​ ಪೇಪರ್​ಗಳು ಬಿದ್ದಿದ್ದವು. ಇದನ್ನು ನೋಡಿದ ರಶ್ಮಿಕಾ, ನಿಮ್ಮ ಕೂದಲಿನಲ್ಲಿ ಅವು ಸಿಲುಕಿವೆ ಎಂದು ಹೇಳಿದರು. ಆದರಿದು, ಶಾಹೀದ್​ಗೆ ಅರ್ಥವಾಗಲಿಲ್ಲ. ತಕ್ಷಣವೇ, ಕೃತಿ ನಟನ ಕೂದಲಿನಿಂದ ಕಲರ್​ ಪೇಪರ್​ಗಳನ್ನು ತೆಗೆದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು, 'ಮದುವೆಯಾದ ಮೇಲೂ ಬಿಕಿನಿಯಲ್ಲಿ ನಟನ ಜೊತೆ ಕುಣಿಯೋದಿಕ್ಕೆ ಆಗುತ್ತೆ. ಅದೇ ಒಂದು ಪೇಪರ್ ತುಂಡನ್ನು ತೆಗೆಯಲು ನಿಮ್ಮಿಂದ ಆಗಲಿಲ್ಲ' ಎಂದು ಟೀಕಿಸಿದ್ದಾರೆ.          
ಈ ಒಂದು ವಿಡಿಯೋಗೆ ಅನೇಕರು ಕಾಮೆಂಟ್​ ಮಾಡಿದ್ದು, ರಶ್ಮಿಕಾ ನಟನ ಹೇರ್​ಸ್ಟೈಲ್​ ಹಾಳಾಗಬಹುದು ಎಂಬ ಕಾಳಜಿಯಲ್ಲಿ ತೆಗೆಯಲಿಲ್ಲ ಎಂದರೆ, ಅವರ ಮದುವೆಗೂ ಮುನ್ನವೇ ಈ ಚಿತ್ರದ ಶೂಟಿಂಗ್ ಆಗಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಾರೆ, ಸೋಷಿಯಲ್ ಮೀಡಿಯಾದಲ್ಲಿ ನಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿರುವ ನೆಟ್ಟಿಗರು, ರಶ್ಮಿಕಾ ಏನೇ ಮಾಡಿದ್ರೂ ನಾವಂತು ಅವರನ್ನು ಟೀಕಿಸುವುದನ್ನು ಬಿಡೋದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮುಖ್ಯವಾಗಿ, ರಶ್ಮಿಕಾಗೆ ಇದೆಲ್ಲವೂ ಅಭ್ಯಾಸವಾಗಿದ್ದು, ಇಂತಹ ಟ್ರೋಲ್​, ನೆಗೆಟಿವ್​ ರಿವ್ಯೂವ್​, ಕಮೆಂಟ್​​ಗಳಿಗೆ ಕ್ಯಾರೇ ಎನ್ನದೆ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಗಮನಾರ್ಹ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net