

ಕಳೆದ ಮೂರು ವರ್ಷಗಳಿಂದ ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’, ಕಳೆದ ವರ್ಷ ತೆರೆಕಂಡಿದ್ದ ‘ಪುಷ್ಪ 2: ದ ರೂಲ್’ ಚಿತ್ರಗಳ ದೊಡ್ಡ ಯಶಸ್ಸಿನ ಬಳಿಕ ರಶ್ಮಿಕಾ, ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಈ ವರ್ಷವೂ ಅವರು ಹೆಚ್ಚು ಬಿಜಿಯಾಗಿದ್ದು, ವರ್ಷಾಂತ್ಯದೊಳಗೆ ಅವರು ನಟಿಸಿರುವ ಐದಾರು ಸಿನಿಮಾಗಳು ಬಿಡುಗಡೆಯಾಗಲಿವೆ. ಅದರಲ್ಲಿ ಮೊದಲನೆ ಚಿತ್ರ ‘ಛಾವಾ’ ಇದೇ ಫೆ. 14ರಂದು ತೆರೆಗೆ ಬರಲಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಐತಿಹಾಸಿಕ ಚಿತ್ರದಲ್ಲಿ ವಿಕ್ಕಿ ಕೌಶಲ್ ಮುಖ್ಯಭೂಮಿಕೆಯಲ್ಲಿದ್ದು, ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ರಶ್ಮಿಕಾ ಜೋಡಿಯಾಗಿದ್ದು, ಸಂಭಾಜಿ ಮಹಾರಾಜರ ಪತ್ನಿ ಮಹಾರಾಣಿ ಯಸುಬಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಟೀಸರ್, ಟ್ರೇಲರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದರೂ, ರಶ್ಮಿಕಾ ಪಾತ್ರವನ್ನು ತೋರಿಸಿರಲಿಲ್ಲ. ಇದೀಗ, ಅವರ ಪಾತ್ರದ ಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಅವರು ಮಹಾರಾಣಿಯ ಪೋಷಾಕಿನಲ್ಲಿ, ಮೈ ತುಂಬ ಆಭರಣ, ಹಣೆಗೆ ಬಿಂದಿ, ಮೂಗುತಿ ಧರಿಸಿ ಮರಾಠಾ ರಾಯಲ್ ಲುಕ್‌ನಲ್ಲಿ ಮಿಂಚಿದ್ದಾರೆ. ಒಂದು ಕೈಯಲ್ಲಿ ಸೀರೆ ಸೆರಗು, ಇನ್ನೊಂದು ಕೈಯಲ್ಲಿ ಕವಡೆ ಸರ ಹಿಡಿದಿದ್ದಾರೆ. ‘ಛಾವಾ’ ಜತೆ ರಶ್ಮಿಕಾ, ‘ಸಿಕಂದರ್’, ‘ದ ಗರ್ಲ್‌ರ್ೆಂಡ್’, ‘ಕುಬೇರ’, ‘ಥಮಾ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್