F** ಪದ ಬಳಸಿ, 'ಅಯ್ಯೋ ಸ್ವಾರಿ' ಎಂದ ರಶ್ಮಿಕಾ; ಬಿದ್ದು ಬಿದ್ದು ನಕ್ಕ 'Cocktail 2' ಚಿತ್ರತಂಡ

Cocktail 2
Cocktail 2
Published on

ಪ್ರಮುಖ ಮುಖ್ಯಾಂಶಗಳು

  • ಜೂನ್ 19 ರಂದು ಕಾಕ್ಟೇಲ್​-2 ​ ಸಿನಿಮಾ ರಿಲೀಸ್ ಆಗಲು ಸಜ್ಜು
  • ಕಾಕ್ಟೇಲ್​-2 ಸಿನಿಮಾದ ಹಾಡು ರಿಲೀಸ್ ಮಾಡಿದ ಚಿತ್ರ ತಂಡ
  • ಕೃತಿ ಸನೂನ್​ ಸೌಂದರ್ಯ ಹೊಗಳುವ ಬರದಲ್ಲಿ F** ಪದ ಬಳಕೆ ಮಾಡಿದ ಕೃತಿ
Cocktail 2ಸಿನಿಮಾದ ಹಾಡು ರಿಲೀಸ್​ ಈವೆಂಟ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರು, ಕೃತಿ ಸನೂನ್​ ಅವರ ಸೌದರ್ಯ ಹಾಟ್​ ಎಂದು ಹೊಗಳುವ ಬರದಲ್ಲಿ ಎಫ್​​​**** ಪದ ಬಳಕೆ ಮಾಡಿ ಪೇಚಿಗೆ ಸಿಲುಕಿಕೊಂಡು, ವೇದಿಕೆಯಲ್ಲಿರುವವರೆಲ್ಲ ಹುಬ್ಬೇರಿಸುವಂತೆ ಮಾಡಿದರು.
ಭಾನುವಾರ ರಾತ್ರಿ ಕಾಕ್ಟೇಲ್​ ಸಿನಿಮಾದ ಹಾಡು ರಿಲೀಸ್​ ಈವೆಂಟ್​ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ತಂಡವು ಹೊಸ ಟ್ರ್ಯಾಕ್ ಅನ್ನು ಅನಾವರಣಗೊಳಿಸಿತು. ಇದರಲ್ಲಿ ನಿರ್ಮಾಪಕ ದಿನೇಶ್ ವಿಜನ್, ನಿರ್ದೇಶಕ ಹೋಮಿ ಅದಜಾನಿಯಾ ಮತ್ತು ಸಂಗೀತ ಸಂಯೋಜಕ ಪ್ರೀತಮ್ ಭಾಗವಹಿಸಿದ್ದರು. ಕೃತಿ ಸನೂನ್​, ರಶ್ಮಿಕಾ ಮಂದಣ್ಣ ಹಾಗೂ ಶಾಹಿದ್​ ಕಪೂರ್​ ವೇದಿಕೆ ಮೇಲೆ ನಿಂತಿದ್ದರು.
ಎಫ್ ಪದ ಬಳಸಿ ಮುಜುಗರಕ್ಕೀಡಾದ ರಶ್ಶು
ಈ ವೇಳೆ ರಶ್ಮಿಕಾ ಮಂದಣ್ಣ ಮಾತನಾಡಿರುವುದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಕ್​ಟೇಲ್​ ಸಿನಿಮಾದಲ್ಲಿ ಏನೋ ಒಂದು ವಿಶೇಷತೆ ಇದೆ. ಕೃತಿ ಸನೂನು ನೀವು ಸಖತ್​ ಹಾಟ್​ ಆಗಿ ಕಾಣುತ್ತೀರ. ಅದು ಈ ಜಗತ್ತಿಗೆ ಗೊತ್ತು. ನೀವು ಎಫ್***ಹಾಟ್​ ಎಂದಿದ್ದಾರೆ. ಅಯ್ಯೋ ಸ್ವಾರಿ ಅದನ್ನು ಸೈಲೆಂಟ್ ಮಾಡಿಬಿಡಿ ಎಂದು ದೊಡ್ಡದಾಗಿ ನಕ್ಕರು, ಬಾಯ್ಮುಚ್ಚಿಕೊಂಡರು. ಅತ್ತಿಂದ ಕೃತಿ ಸನೂನ್​ ಅವರು ಓಡಿ ಬಂದು ರಶ್ಮಿಕಾ ಮಂದಣ್ಣ ಅವರನ್ನು ತಂಬ್ಬಿಕೊಂಡರು.
ಈ ಪ್ರಕ್ರಿಯೆಯಿಂದ ಕೊಂಚ ಮುಜುಗರಕ್ಕೊಳಗಾದರೂ ಸಹ ಅಲ್ಲಿದ್ದ ಪ್ರೇಕ್ಷಕರು, ಸಿನಿಮಾ ತಂಡ ಹಾಗೂ ಇನ್ನಿತರರು ಜೋರಾಗಿ ನಕ್ಕು ಚಪ್ಪಾಳೆ ತಟ್ಟಿದರು. ನಂತರ ರಶ್ಮಿಕಾ ಅವರು ತಮ್ಮ ಮಾತು ಮುಂದುವರೆಸಿದರು. ನಾವೆಲ್ಲ ಈ ಸಿನಿಮಾದಲ್ಲಿ ಚೆಂದವಾಗಿ ನಟಿಸಿದ್ದೇವೆ. ಪ್ರತಿಯೊಂದು ದೃಶ್ಯ ಮ್ಯಾಜಿಕಲ್​ನಂತಿದೆ. ಈಗ ಟ್ರೈಲರ್​ ಅಷ್ಟೇ ಇನ್ನು ಸಾಕಷ್ಟು ವಿಚಾರ ಇದೆ. ಸಿನಿಮಾಗಾಗಿ ಕಾದು ನೋಡಿ ಎಂದಿದ್ದಾರೆ.


ಕಾಕ್ಟೇಲ್ ರಿಲೀಸ್ ಯಾವಾಗಾ?

ಸೋಮಿ ಅದಾಜಾನಿಯಾ ನಿರ್ದೇಶನ ಕಾಕ್​ಟೇಲ್​ ಸಿನಿಮಾಗೆ ನಿರ್ಮಾಪಕ ದಿನೇಶ್​ ವಿಜನ್​ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಚಿತ್ರ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.2012ರಲ್ಲಿ ಸೂಪರ್​ ಹಿಟ್​ ಎನಿಸಿಕೊಂಡಿದ್ದ ಕಾಕ್ಟೇಲ್​ ಸಿನಿಮಾದ ಮುಂದುವರೆದ ಭಾಗ ಇದಾಗಿದೆ ಎನ್ನಲಾಗುತ್ತಿದೆ. ಕಾಕ್ಟೇಲ್ ಭಾಗ 1ರಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟಿಸಿದ್ದಾರೆ. ಇದು ಮೂವರು ನಾಯಕಿಯರ ನಡುವಿನ ಪ್ರೇಮ ತ್ರಿಕೋನವನ್ನು ಒಳಗೊಂಡಿತ್ತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು ಮತ್ತು 120 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಿತು. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net