ಅಮಿತಾಭ್​ಗೆ ಮಗಳಾಗಿ ರಶ್ಮಿಕಾ ಮಂದಣ್ಣ!

Rashmika mddanna Amitabh Bachchan
Published on

ಬೆಂಗಳೂರು: ಸೌತ್ ಸೆನ್ಸೆಷನ್, ಕನ್ನಡತಿ ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಆ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಇದೀಗ ಅದಕ್ಕಿಂತ ಇನ್ನೊಂದು ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಚಿತ್ರದಲ್ಲಿಯೂ ರಶ್ಮಿಕಾ ನಟಿಸಲಿದ್ದಾರಂತೆ! ಈಗಾಗಲೇ ‘ಕ್ವೀನ್’, ‘ಸೂಪರ್ 30’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ವಿಕಾಸ್ ಬಹ್ಲ್ ಈ ಚಿತ್ರಕ್ಕೆ ಆಕ್ಟನ್ ಕಟ್ ಹೇಳಲಿದ್ದು, ಚಿತ್ರದಲ್ಲಿ ಅಮಿತಾಬ್​ಗೆ ಮಗಳಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ.

ಅಪ್ಪ ಮತ್ತು ಮಗಳ ಕಥೆಯೇ ಈ ಚಿತ್ರದ ಮುಖ್ಯ ಕಥಾಹಂದರ. ತಾತ್ಕಾಲಿಕವಾಗಿ ‘ಡೆಡ್ಲಿ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ರಿಲಯನ್ಸ್ ಎಂಟರ್​ಟೈನ್​ವೆುಂಟ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ 2021ರ ಮಾರ್ಚ್ ವೇಳೆಗೆ ಸೆಟ್ಟೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net