ವಿಜಯ್​ಗೆ ರಶ್ಮಿಕಾ ಫಿಕ್ಸ್; ತಮಿಳಿನ ಸ್ಟಾರ್ ನಟನ ಚಿತ್ರಕ್ಕೆ ನಾಯಕಿ

Rashmika
Published on

ಬೆಂಗಳೂರು: ತಮಿಳಿನ ಸ್ಟಾರ್ ನಟ ವಿಜಯ್ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳಿಂದ ಹರಿದಾಡಿತ್ತಾದರೂ, ಅಧಿಕೃತ ಘೋಷಣೆ ಮಾತ್ರ ಆಗಿರಲಿಲ್ಲ. ಇದೀಗ ಆ ಗಳಿಗೆಯೂ ಬಂದೇ ಬಿಟ್ಟಿದೆ. ರಶ್ಮಿಕಾ ಬರ್ತ್​ಡೇ ನಿಮಿತ್ತ ಮಂಗಳವಾರ ಚಿತ್ರ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಕ್ರಿಯೇಶನ್ಸ್ ಈ ವಿಚಾರವನ್ನು ಹೇಳಿಕೊಂಡಿದೆ. ಅಷ್ಟೇ ಅಲ್ಲ, ಬುಧವಾರ ಈ ಚಿತ್ರದ ಮುಹೂರ್ತ ಸಹ ನೆರವೇರಿದೆ.

ಈಗಾಗಲೇ ಟಾಲಿವುಡ್​ನಲ್ಲಿ ಕಡಿಮೆ ಸಿನಿಮಾ ಮಾಡಿದರೂ, ಹಿಟ್ ಕೊಟ್ಟಿರುವ ನಿರ್ದೇಶಕ ವಂಶಿ ಪೈಡಿಪಳ್ಳಿ ಇದೀಗ ಮೊದಲ ಸಲ ತಮಿಳು ನಟನಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಶೀರ್ಷಿಕೆ ಅಂತಿಮವಾಗದ ಈ ಚಿತ್ರ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ, ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಬೇಕಿದೆ. ವಿಜಯ್ ನಟನೆಯ 66ನೇ ಚಿತ್ರ ಇದಾಗಿದ್ದು, ಈ ಸಿನಿಮಾ ಸಲುವಾಗಿ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ದುಬಾರಿ ವೆಚ್ಚದ ಸೆಟ್ ನಿರ್ಮಾಣ ಕಾರ್ಯ ಶುರುವಾಗಿದೆ. ಚಿತ್ರಕ್ಕೆ ತಮನ್ ಸಂಗೀತ ನೀಡಲಿದ್ದು, ದಿಲ್ ರಾಜು ಈ ಚಿತ್ರದ ನಿರ್ಮಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net