ರಶ್ಮಿಕಾ ಮಂದಣ್ಣ ಬಿಟ್ಟ ಪಾತ್ರದಲ್ಲಿ ಮಾಳವಿಕಾ

Rashmika
Published on

ಒಂದು ಕಾಲಕ್ಕೆ ರಶ್ಮಿಕಾ ಯಾವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ, ಈಗ ಅವರು ಯಾವ ಚಿತ್ರ ಬಿಟ್ಟಿದ್ದಾರೆ ಎಂಬ ವಿಷಯದ ಬಗ್ಗೆ ಎಲ್ಲರಿಗೂ ಕುತೂಹಲ. ಅದಕ್ಕೆ ಕಾರಣವೂ ಇದೆ. ರಶ್ಮಿಕಾಗೆ ಈಗ ಕೈತುಂಬಾ ಕೆಲಸವಿದೆ. ಹಾಗಾಗಿ, ಅವವರು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರಿಗೆ ಸಿಕ್ಕ ಅವಕಾಶಗಳು ಈಗ ಬೇರೆಯವರ ಪಾಲಾಗುತ್ತಿದೆ. ಅದೇ ರೀತಿ, ವಿಕ್ರಮ್ ಅಭಿನಯದ ಹೊಸ ಚಿತ್ರವೊಂದರಲ್ಲಿ ರಶ್ಮಿಕಾ ಹೆಸರು ಮೊದಲು ಕೇಳಿ ಬಂದಿದ್ದು, ಈಗ ಆ ಪಾತ್ರಕ್ಕೆ ಮಾಳವಿಕಾ ಮೋಹನನ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪ. ರಂಜಿತ್ ನಿರ್ದೇಶನದ ಹೊಸ ಚಿತ್ರದಲ್ಲಿ ವಿಕ್ರಮ್ೆ ನಾಯಕಿಯಾಗಿ ರಶ್ಮಿಕಾ ನಟಿಸಬೇಕಿತ್ತಂತೆ. ಆದರೆ, ಈಗ ಅದು ಸಾಧ್ಯವಾಗುತ್ತಿಲ್ಲ. ಕಾರಣ, ರಶ್ಮಿಕಾ ಕೈಯಲ್ಲಿ ಮೂರು ದೊಡ್ಡ ಚಿತ್ರಗಳಿವೆ. ಈಗಾಗಲೇ ಅವರು ವಿಜಯ್ ಜತೆಗೆ ‘ವಾರಿಸು’ ಮತ್ತು ರಣಬೀರ್ ಕಪೂರ್ ಜತೆಗೆ ‘ಅನಿಮಲ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವೆರಡರ ಜತೆಗೆ ಈಗ ‘ಪುಷ್ಪ 2’ ಚಿತ್ರ ಸಹ ಶುರುವಾಗಿದೆ. ಹಾಗಾಗಿ, ಬೇರೆ ದಾರಿ ಇಲ್ಲದೆ, ವಿಕ್ರಮ್ ಜತೆಗೆ ನಟಿಸಬೇಕಿದ್ದ ಚಿತ್ರವನ್ನು ರಶ್ಮಿಕಾ ಬಿಟ್ಟಿದ್ದಾರಂತೆ. ಅವರು ಮಾಡಬೇಕಿದ್ದ ಪಾತ್ರವು ಇದೀಗ ‘ನಾನು ಮತ್ತು ವರಲಕ್ಷ್ಮೀ’ ಖ್ಯಾತಿಯ ಮಾಳವಿಕಾಗೆ ಹೋಗಿದೆಯಂತೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net