ಮೈಸೂರು ಪ್ರವಾಸದಲ್ಲಿ ರಾಶಿ ಖನ್ನಾ! Rashi Khanna

Raashii Khanna: ತೆಲುಗು, ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು ತನ್ನದೇ ಆದ ವಿಭಿನ್ನ ನಟನಾ ಶೈಲಿ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟಿ ಎಂದರೆ ಅದು ರಾಶಿ ಖನ್ನಾ ಆಗಿದ್ದಾರೆ. ನಟಿ ರಾಶಿ ಇತ್ತೀಚೆಗೆ ಮೈಸೂರಿಗೆ ಬಂದಿದ್ದು, ಇಲ್ಲಿಯ ದೇವಸ್ಥಾನಗಳಿಗೆ ಬೇಟಿ ನೀಡಿ, ತಮ್ಮ ಆತ್ಮೀಯರ ಜತೆ ಯುನೋ (UNO) ಆಟವನ್ನು ಆಡಿ. ಹಾಗೆಯೇ ಮೈಸೂರಿನ ಫೇಮಸ್​ ಮೈಸೂರು ದೋಸೆಯನ್ನು ಸವಿದಿದ್ದಾಗಿ ನಟಿ ತಮ್ಮ ಸೋಷಿಯಲ್​ ಮೀಡಿಯಾ ವೇದಿಕೆ ಇನ್​ಸ್ಟಾಗ್ರಾಮ್​ ವೇದಿಕೆಯಲ್ಲಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳಿಗೆ ಅಭಿಮಾನಿಗಳಿಂದ, ಅದರಲ್ಲೂ ಕನ್ನಡಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೈಸೂರು ಪ್ರವಾಸದಲ್ಲಿ ರಾಶಿ ಖನ್ನಾ! Rashi Khanna
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net