ಎನರ್ಜೆಟಿಕ್ ರಾಷಾ!: ‘ಆಜಾದ್’ ಚಿತ್ರದ ‘ಉಯಿ ಅಮ್ಮ’ ಸಾಂಗ್‌ನ ನೃತ್ಯಕ್ಕೆ ಫ್ಯಾನ್ಸ್ ಫಿದಾ

rasha 2
Published on

ಹಿಂದಿಯ ‘ಕೇದರನಾಥ್’ ಖ್ಯಾತಿಯ ಅಭಿಷೇಕ್ ಕಪೂರ್ ನಿರ್ದೇಶನದ ಐತಿಹಾಸಿಕ ‘ಆಜಾದ್’ ಚಿತ್ರದ ಮೂಲಕ ನಟಿ ರವೀನಾ ಟಂಡನ್ ಪುತ್ರಿ ರಾಷಾ ತದಾನಿ ಬಾಲಿವುಡ್‌ಗೆ ಎಂಟ್ರಿ ನೀಡಿರುವ ವಿಚಾರ ಗೊತ್ತೇ ಇದೆ. ರಾಷಾ ಜತೆ ಬಾಲಿವುಡ್ ನಟ ಅಜಯ್ ದೇವ್ಗನ್ ಸಂಬಂಧಿ ಅಮಾನ್ ದೇವ್ಗನ್ ಕೂಡ ಈ ಚಿತ್ರದ ಮೂಲಕವೇ ಬಣ್ಣದ ಲೋಕಕ್ಕೆ ಡೆಬ್ಯೂ ಮಾಡುತ್ತಿರುವುದು ವಿಶೇಷ. ಇದೊಂದು ಸ್ವಾತಂತ್ರ್ಯಪೂರ್ವ ಕಥೆಯಾಗಿದ್ದು, ಅಜಯ್ ದೇವ್ಗನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಹಿಂದೆ ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಮಾಡಿ, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಿತ್ತು. ಇದೀಗ, ಚಿತ್ರದ ಮತ್ತೊಂದು ‘ಉಯಿ ಅಮ್ಮ’ ಎಂಬ ಶೀರ್ಷಿಕೆ ಸಾಂಗ್ ಬಿಡುಗಡೆಯಾಗಿದ್ದು, ನಟಿ ರಾಷಾ ತದಾನಿ ನೃತ್ಯಕ್ಕೆ ್ಯಾನ್ಸ್ ಫಿದಾ ಆಗಿದ್ದಾರೆ. ಗಾಯಕಿ ಮಧುವಂತಿ ಬಾಗ್ಚಿ ಹಾಡಿರುವ ಈ ಹಾಡಿಗೆ ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯವಿದೆ. ಬೊಸ್ಕೊ ಲೆಸ್ಲಿ ಮಾರ್ಟಿಸ್ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ರಾಷಾ ತದಾನಿ- ಆಮಾನ್ ಇಬ್ಬರು ಬೋಲ್ಡ್ ರ್ಪಾಮೆನ್ಸ್ ನೀಡಿದ್ದಾರೆ. ಇನ್ನು ಕೆಲವರು ರಾಷಾ ಲುಕ್‌ನ್ನು ಕತ್ರಿನಾ ಕ್ೈಗೆ ಹೋಲಿಸಿದ್ದಾರೆ. ‘ಚಿಕಿನಿ ಚಮ್ಮೇಲಿ’ ಸಾಂಗ್‌ನಲ್ಲಿ ಕೂಡ ಕತ್ರೀನಾ ಇದೇ ರೀತಿಯಾಗಿ ಸ್ಟೆಪ್ ಹಾಕಿದ್ದರು. ಡೆಬ್ಯೂ ಸಿನಿಮಾದಲ್ಲಿಯೇ ರಾಷಾ ತದಾನಿ ಅಭಿನಯಕ್ಕೆ ಹಲವೆಡೆ ಮೆಚ್ಚುಗೆ ವ್ಯಕ್ತವಾಗಿದೆ. ‘ಆಜಾದ್’ ಇದೇ ತಿಂಗಳ 17ರಂದು ವಿಶ್ವಾದ್ಯಂತ ತೆರೆ ಮೇಲೆ ಬರಲಿದೆ. -ಏಜೆನ್ಸೀಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net