ಚಂದನ್ ಕಾಲೆಳೆದ ಕಾಲ; ಗಾಯಕನಿಂದ ನಾಯಕನಾಗಿ..

Chandan
Published on

ಬೆಂಗಳೂರು: ರ‌್ಯಾಪರ್ ಚಂದನ್ ಶೆಟ್ಟಿ ತಮ್ಮ ಹಾಡುಗಳ ಮೂಲಕವೇ ಎಲ್ಲರನ್ನು ಕುಣಿಸುತ್ತಿದ್ದಾರೆ. ಇದೀಗ ಗಾಯನ ಮತ್ತು ಸಂಗೀತ ನಿರ್ದೇಶನದ ಜತೆಯಲ್ಲಿಯೇ ಐದು ವರ್ಷಗಳ ಬಳಿಕ ನಟನೆಗೂ ಅವರು ಮರಳುತ್ತಿದ್ದಾರೆ. ‘ಎಲ್ರ ಕಾಲೆಳೆಯುತ್ತೆ ಕಾಲ’ ಎನ್ನುವ ಹೊಸ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ.

ಈ ಹಿಂದೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ನಿರ್ದೇಶಿಸಿದ್ದ ಸುಜಯ್ ಶಾಸ್ತ್ರಿ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. 70-80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಾಜ್​ಗುರು ಹೊಸಕೋಟೆ ಬರೆದರೆ, ಪ್ರವೀಣ್ ಮತ್ತು ಪ್ರದೀಪ್ ಸಂಗೀತ, ವಿಶ್ವಜಿತ್ ರಾವ್ ಛಾಯಾಗ್ರಹಣ ಮಾಡಲಿದ್ದಾರೆ.

ಇನ್ನುಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ನಾಯಕಿ ಯಾರೆಂಬ ವಿಚಾರವೂ ಶೀಘ್ರದಲ್ಲಿ ಗೊತ್ತಾಗಲಿದೆ. ಉಷಾ ಗೋವಿಂದರಾಜು ಈ ಚಿತ್ರ ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net