ರಣವೀರ್​ ನಗ್ನಾವತಾರ: ಎಲ್ಲರ ಹುಬ್ಬೇರುವಂತಿದೆ ಪತ್ನಿ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ!

Deepika
Published on

ಮುಂಬೈ: ನಗ್ನರಾಗಿ ಫೋಟೋಶೂಟ್​ ಮಾಡಿಸುವ ಮೂಲಕ ಭಾರೀ ಟ್ರೋಲ್​​ಗೊಳಗಾಗಿದ್ದ ಬಾಲಿವುಡ್​ ನಟ ರಣವೀರ್​ ಸಿಂಗ್ ಕುರಿತು ಇದೀಗ ಪತ್ನಿ ದೀಪಿಕಾ ಪಡುಕೋಣೆ ಹೇಳಿಕೆ ಎಲ್ಲರ ಹುಬ್ಬೇರುವಂತಿದೆ.

ಈಗಾಗಲೇ ಚಿತ್ರ-ವಿಚಿತ್ರ ಡ್ರೆಸ್​ಗೆ ಸಕತ್​ ಫೇಮಸ್​ ಆಗಿರುವ ರಣಬೀರ್​, ಈ ಬಾರಿ ಮಾಡೆಲ್​ಗಳು ಹಾಗೂ ನಟಿಮಣಿಯರನ್ನೇ ಹಿಂದಿಕ್ಕಿದ್ದಾರೆ. ನಗ್ನರಾಗಿ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಕೋಲಾಹಲವನ್ನೇ ಸೃಷ್ಟಿಸಿದ್ದರು.

ಅಂದಹಾಗೆ ಪತಿಯ ಈ ಅವತಾರಕ್ಕೆ ಪತ್ನಿ ದೀಪಿಕಾ ಪ್ರತಿಕ್ರಿಯೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಈ ಫೋಟೋಗಳು ಜಾಲತಾಣದಲ್ಲಿ ಹರಿದಾಡುವ ಮುನ್ನವೇ ದೀಪಿಕಾ ವೀಕ್ಷಿಸಿದ್ದರಂತೆ, ಅಲ್ಲದೇ ತುಂಬಾ ಚೆನ್ನಾಗಿವೆ ಎಂದು ಪ್ರತಿಕ್ರಿಯೆ ಕೂಡ ನೀಡಿದ್ದರಂತೆ. ಈ ಫೋಟೋ ವೈರಲ್​ ಆದ ಬಳಿಕವೂ ದೀಪಿಕಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪತಿಗೆ ಬೆಂಬಲವಾಗಿ ನಿಂತಿದ್ದಾರೆ.

ಮ್ಯಾಗಜಿನ್‌ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್‌ವೀರ್ ಪೋಸ್ ನೀಡಿದ್ದರು, ಇದನ್ನು ನೋಡಿ ಹಲವರು ಗರಂ ಆಗಿದ್ದಾರೆ. ಪತ್ನಿ ದೀಪಿಕಾ ಪಡುಕೋಣೆ ಅವರಿಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದು, ನಿಮ್ಮ ಪತಿಗೆ ಸ್ವಲ್ಪ ಬುದ್ಧಿ ಹೇಳಿ ಎಂದಿದ್ದರು, ಆದರೀಗ ಪತ್ನಿಯಿಂದಲೇ ರಣವೀರ್​ ಅವತಾರಕ್ಕೆ ಫುಲ್​ ಮಾರ್ಕ್ಸ್​ ಸಿಕ್ಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net