ಲಾಕ್​ಡೌನ್​ನಲ್ಲಿ ರಣವೀರ್​ ಸಿಂಗ್ ಬಾಡಿ ನೋಡಿದ್ರೆ ನಿಜಕ್ಕೂ ಅಚ್ಚರಿಪಡ್ತೀರಾ!

rana
Published on

ಲಾಕ್​ಡೌನ್​ ಅವಧಿಯಲ್ಲಿ ಸಿನಿಮಾ ನಟರು ಜಿಮ್​ಗಳಲ್ಲಿ ಬೆವರಿಳಿಸುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿಯೂ ಕಿಚ್ಚ ಸುದೀಪ್​, ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ವರ್ಕೌಟ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಿ ಅಭಿಮಾನಿಗಳ ಕುತೂಹಲಕ್ಕೆ ಒಗ್ಗರಣೆ ಹಾಕುತ್ತಿದ್ದಾರೆ. ಬಾಲಿವುಡ್​ ಘಟಾನುಘಟಿಗಳಾದ ಸಲ್ಮಾನ್​ ಖಾನ್​, ಹೃತಿಕ್​ ರೋಷನ್ ಸೇರಿ ಹಲವರು ಬಾಡಿ ಟ್ಯೂನ್​ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅದಕ್ಕೆ ಸಾಕ್ಷಿ ಎಂಬಂತೆ ರಣವೀರ್​ ಸಿಂಗ್​ ದೇಹವನ್ನು ಹುರಿಯಾಗಿಸಿಕೊಂಡಿದ್ದಾರೆ. ಫೋಟೋವೊಂದನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸಿನಿಮಾ ಸಲುವಾಗಿ ಆಗಾಗ ದೈಹಿಕವಾಗಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ರಣವೀರ್​, ಇದೀಗ ಯಾವ ಚಿತ್ರಕ್ಕೆ ಈ ರೀತಿಯ ಕಟ್ಟುಮಸ್ತಾದ ಬಾಡಿ ಮಾಡಿದ್ದಾರೆ ಎಂಬುದು ಸದ್ಯದ ಕುತೂಹಲ. ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್​ ತಿಂಗಳಲ್ಲೇ ಬಹುನಿರೀಕ್ಷಿತ 83 ಸಿನಿಮಾ ತೆರೆಕಂಡಿರಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಯಿತು. ಅದೇ ರೀತಿ ‘ಜಯೇಶ್​ ಭಾಯ್​ ಜೋರ್ದಾರ್’ ಚಿತ್ರದ ಕೆಲಸಗಳು ಮುಕ್ತಾಯವಾಗಿದ್ದು, ಅದರ ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಿಸಿಕೊಳ್ಳಲಿದೆ ಚಿತ್ರತಂಡ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net