

ಜನಪದ ಶೈಲಿಯ ಕಥೆ ಹೊಂದಿರುವ ‘ರಂಗಸಮುದ್ರ’ ಸಿನಿಮಾ ಪೋಸ್ಟರ್ಅನ್ನು ನಟ ಕಿಚ್ಚ ಸುದೀಪ್ ಇತ್ತೀಚೆಗೆ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. ‘ಹೊಯ್ಸಳ ಕ್ರಿಯೇಷನ್ಸ್’ ಬ್ಯಾನರ್ನಲ್ಲಿ ನಿರ್ಮಾಣ ಆಗಿರುವ ಈ ಚಿತ್ರಕ್ಕೆ ನಿರ್ದೇಶಕ ರಾಜ್ಕುಮಾರ್ ಅಸ್ಕಿ ಆಕ್ಷನ್-ಕಟ್ ಹೇಳಿದ್ದಾರೆ.
‘ಇದು ಜನಪದದ ಕುರಿತ ಸಿನಿಮಾ. ಸಮುದ್ರ ಎಂದಮೇಲೆ ಅಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಹೀಗಾಗಿ ಚಿತ್ರಕ್ಕೆ ಈ ಟೈಟಲ್ ಇಟ್ಟಿದ್ದೇವೆ. 1990-95ರ ಅವಧಿಯ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಸೊಗಡು ಪ್ರಧಾನವಾಗಿ ಇರಲಿದೆ. ಸಿನಿಮಾದಲ್ಲಿ ಹೀರೋ-ಹೀರೋಯಿನ್ ಎಂದೆಲ್ಲ ಇರುವುದಿಲ್ಲ.
ಇಲ್ಲಿ ಪ್ರತಿಪಾತ್ರವೂ ಪ್ರಧಾನವಾಗಿರಲಿದೆ’ ಎಂಬ ಮಾಹಿತಿ ನೀಡಿದ್ದಾರೆ ನಿರ್ದೇಶಕರು. ನಿರ್ವಪಕ ಹೊಯ್ಸಳ ಅವರು ಬಂಡವಾಳ ಹೂಡಿರುವ ಈ ಚಿತ್ರದ ಶೂಟಿಂಗ್ ಶೇ. 80 ಮುಗಿದಿದೆ. ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು, ಸಂಪತ್ ಕುಮಾರ್, ಕಾರ್ತಿಕ್ ರಾವ್, ದಿವ್ಯಾ ಗೌಡ, ಮಹೇಂದ್ರ, ಸ್ಕಂದ ಮುಂತಾದವರು ನಟಿಸಿದ್ದಾರೆ.