ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಬಾಲಿವುಡ್ ನಟ

Randeep Hooda Final
Published on

ಈಗಾಗಲೇ ಹಲವು ಬಾಲಿವುಡ್ ಕಲಾವಿದರು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಬಂದಿದ್ದಾರೆ. ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪುಡುಕೋಣೆ, ರ್ಇಾನ್ ಖಾನ್ ಸೇರಿದಂತೆ ಹಲವು ಸ್ಟಾರ್ ನಟರು ನಟಿಸಿದ್ದು, ಇದೀಗ ಮತ್ತೊಬ್ಬ ನಟ ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆ ನಟ ಯಾರು ಗೊತ್ತಾ? ರಣದೀಪ್ ಹೂಡಾ.

ಈಗಾಗಲೇ ‘ಸರಬ್ಜಿತ್’, ‘ಕಿಕ್’, ‘ಹೈವೇ’ ಮುಂತಾದ ಚಿತ್ರಗಳಲ್ಲಿ ದೊಡ್ಡ ಹೆಸರು ಮಾಡಿರುವ ರಣದೀಪ್ ಹೂಡಾ, ಇದೀಗ ಹಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಚಿತ್ರಿಸಲಾಗಿರುವ ‘ಎಕ್ಸ್‌ಟ್ರಾಕ್ಷನ್’ ಎಂಬ ಚಿತ್ರದಲ್ಲಿ ರಣದೀಪ್ ನಟಿಸಿದ್ದು, ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಏಪ್ರಿಲ್ 24ರಿಂದ ಸ್ಟ್ರೀಮ್ ಆಗಲಿದೆ.

ಕ್ರಿಸ್ ಹೆಮ್ಸ್‌ವರ್ಥ್ ನಾಯಕನಾಗಿ ನಟಿಸಿರುವ ಈ ಚಿತ್ರದ ಕಥೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ನಡೆಯಲಿದ್ದು, ಕಳೆದ ವರ್ಷ ಪೂಣೆ, ಅಹಮದಾಬಾದ್ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಇದುವರೆಗೂ ಹಲವು ಭಾರತೀಯ ಕಲಾವಿದರು ಹಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದರೂ, ಇಷ್ಟೊಂದು ಆ್ಯಕ್ಷನ್ ದೃಶ್ಯಗಳಲ್ಲಿ ಯಾರೂ ನಟಿಸಿರಲಿಲ್ಲವಂತೆ. ಅಂಥದ್ದೊಂದು ಆ್ಯಕ್ಷನ್ ಪ್ಯಾಕ್ಡ ಪಾತ್ರವನ್ನು ರಣದೀಪ್ ಈ ಚಿತ್ರದಲ್ಲಿ ಮಾಡಿದ್ದಾರೆ ಎನ್ನುವುದು ವಿಶೇಷ.

ಈಗಾಗಲೇ ರಣದೀಪ್ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಮೂಲಕ ಚಿತ್ರದ ‘ಬಿಹೈಂಡ್ ದಿ ಸೀನ್ಸ್’ ವೀಡಿಯೋ ಹಂಚಿಕೊಂಡಿದ್ದು, ಅದಕ್ಕೆ ಸಾಕಷ್ಟು ಹಿಟ್ಸ್ ಸಿಕ್ಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net