

ಒಳ್ಳೆತನ ಎಷ್ಟೇ ಇದ್ದರೂ ಕೆಟ್ಟತನ ಗೆಲ್ಲುತ್ತದೆ ಎಂದು ಎಡವಟ್ಟು ಮಾಡಿಕೊಂಡ ನಟ ರಣಬೀರ್ ಕಪೂರ್
ನಟ ರಣಬೀರ್ ಕಪೂರ್ ವಿರುದ್ಧ ಟ್ರೋಲ್ ಹೆಚ್ಚಾಗುತ್ತಲೇ ಎಚ್ಚೆತ್ತು ವೇದಿಕೆಯಲ್ಲಿ ಕ್ಷಮೆಯಾಚನೆ
ಸಾರಿ ನನ್ನ ಬಾಯಿ ತೊದಲಿತು ಎಂದು ಕ್ಷಮೆಯಾಚಿಸಿದ ನಟ ರಣಬೀರ್ ಕಪೂರ್
Ranbir Kapoor Apologises For Slip Of The Tongue: ರಾಮಾಯಣ ಭಾಗ 1 ಸಿನಿಮಾವು ನವೆಂಬರ್ 5ರಂದು ರಿಲೀಸ್ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಿಂದ ಸಾಗುತ್ತಿದೆ. ಆದರೆ ನಟ ರಣಬೀರ್ ಕಪೂರ್ ಅವರು ಮಾತನಾಡುವ ಭರದಲ್ಲಿ ತಪ್ಪಾಗಿ ಅರ್ಥ ಬರುವಂತೆ ಹೇಳಿಕೆ ಕೊಟ್ಟಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಬೆನ್ನಲ್ಲೇ ಎಚ್ಚೆತ್ತ ಅವರು ಚೆನ್ನೈನಲ್ಲಿ ನಡೆದ ರಾಮಾಯಣ ಪ್ರೀ ರಿಲೀಸ್ ಈವೆಂಟ್ನಲ್ಲಿ ಕ್ಷಮೆ ಕೇಳಿ, ಸ್ಪಷ್ಟನೆ ಕೊಟ್ಟಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ರಾಮಾಯಣ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಟ್ಟತನವೆನ್ನುವುದು ಬೃಹತ್ ಪ್ರಮಾಣದಲ್ಲಿದ್ದರೂ ಸಹ ಕೊನೆಗೆ ಗೆಲ್ಲುವುದು ಸತ್ಯ ಮತ್ತು ಒಳ್ಳೆಯತನ ಮಾತ್ರ ಎಂದು ಹೇಳುವ ಬದಲಾಗಿ, ಒಳ್ಳೆತನ ಎಷ್ಟೇ ಇದ್ದರೂ ಕೆಟ್ಟತನ ಗೆಲ್ಲುತ್ತದೆ ಎಂದು ಹೇಳಿ ವಿವಾದಕ್ಕೆ ಸಿಕ್ಕಿ ಹಾಕಿಕೊಂಡಿದ್ದರು.
ದೊಡ್ಡ ವೇದಿಕೆಯಲ್ಲಿ, ಬೃಹತ್ ಬಜೆಟ್ನಲ್ಲಿ ನಿರ್ಮಾಣವಾದ ರಾಮಾಯಣದಂತಹ ಸಿನಿಮಾಗಳ ಬಗ್ಗೆ ಮಾತನಾಡುವಾಗ ಕೊಂಚ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಅಭಿಮಾನಿಗಳು ಸಲಹೆ ಕೊಟ್ಟರು. ಇನ್ನೂ ಕೆಲವರು ಟ್ರೋಲ್ ಮಾಡಿದರು. ಇದರಿಂದ ಎಚ್ಚೆತ್ತ ನಟ ರಣಬೀರ್ ಕಪೂರ್ ಕೂಡಲೇ ಕ್ಷಮೆಯಾಚಿಸಿದ್ದಾರೆ.
'ನಿನ್ನೆ ನಡೆದ ಒಂದು ಘಟನೆಗಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾನು ದಸರಾ ಕಾರ್ಯಕ್ರಮವೊಂದರಲ್ಲಿದ್ದಾಗ ನನ್ನ ಬಾಯಿತಪ್ಪಿ ಮಾತು ಬಂದಿತು. ನಾನು ಹೇಳಲು ಹೊರಟಿದ್ದು ಏನಪ್ಪಾ ಅಂದ್ರೆ, ಕೆಡುಕು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಕೊನೆಗೆ ಸತ್ಯ ಮತ್ತು ಒಳ್ಳೆಯತನವೇ ಗೆಲ್ಲುತ್ತದೆ' ಎನ್ನುವುದನ್ನು ಸ್ಪಷ್ಟಪಡಿಸಿದರು. ರಣಬೀರ್ ಅವರ ಕ್ಷಮೆಯಾಚನೆ ದೊಡ್ಡ ಮಟ್ಟದ ವಿವಾದಕ್ಕೆ ಬೇಗನೇ ಅಂತ್ಯವಾಡುವಂತೆ ಮಾಡಿದೆ.
ಹೈದರಾಬಾದ್‌ನಲ್ಲಿ ನಡೆದ ರಾಮಾಯಣ ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ದಿಲ್ ರಾಜು, ನಾನು ರಣಬೀರ್ ಕಪೂರ್ ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಅತ್ಯುತ್ತಮ ನಟರಲ್ಲಿ ಒಬ್ಬರು, ಅತ್ಯುತ್ತಮ ನಾಯಕ ರಣವೀರ್ ಸಿಂಗ್ ಗಾರು, ಕ್ಷಮಿಸಿ, ರಣಬೀರ್ ಕಪೂರ್ ಎಂದು ತಪ್ಪು ಮಾಡಿ ಕ್ಷಮೆ ಕೇಳಿದ್ರು.
ಐತಿಹಾಸಿಕ ಸಿನಿಮಾದಲ್ಲಿ ತಪ್ಪೋಗೋದು ಸಹಜ. ಸಣ್ಣ ಸಣ್ಣ ವಿಎಫ್ಎಕ್ಸ್ ತಪ್ಪನ್ನು ಸಹ ಹುಡುಕಬೇಡಿ. ಸಿನಿಮಾವನ್ನು ಮುಕ್ತವಾಗಿ ನೋಡಿ ಎಂದು ನಟ ಯಶ್ ಮಾತನಾಡಿದ್ದರು. ಹಣ ಕೊಡೋದೆ ಸಿನಿಮಾ ಬಗ್ಗೆ ಮಾತನಾಡುವುದಕ್ಕೆ. ತಪ್ಪು ಹುಡುಕಿ ಹೇಳಲು. ಫ್ರೀಯಾಗಿ ಟಿಕೆಟ್ ಕೊಡುವುದಾದರೆ ಹೇಳಿ ತಪ್ಪನ್ನು ಹುಡುಕಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದರು.
ನಿತೇಶ್ ತಿವಾರಿ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಯಶ್, ರಣಬೀರ್ ಸಾಯಿ ಪಲ್ಲವಿ, ರವಿ ದುಬೆ, ವಿವೇಕ್ ಒಬೆರಾಯ್, ರಾಕುಲ್ ಪ್ರೀತ್ ಸಿಂಗ್, ಅನುಪಮ್ ಖೇರ್, ಫೈಸಲ್ ಮಲಿಕ್ ಮತ್ತು ಕುನಾಲ್ ಕಪೂರ್ ಇತರರು ನಟಿಸಿದ್ದಾರೆ. ಈ ಚಿತ್ರ ನವೆಂಬರ್ 5 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ, (ಏಜೆನ್ಸೀಸ್).