ನರೇಶ್​ಗೆ ಪೋರ್ನ್​ ವಿಡಿಯೋಗಳನ್ನು ನೋಡುವ ಚಟವಿದೆ: ಗಂಡನ ಮುಖವಾಡ ಕಳಚಿದ 3ನೇ ಪತ್ನಿ ರಮ್ಯಾ

Naresh
Published on

ಹೈದರಾಬಾದ್​: ಕಳೆದ ಕೆಲವು ತಿಂಗಳ ಹಿಂದೆ ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಪವಿತ್ರಾ ಲೋಕೇಶ್​ ಹಾಗೂ ನರೇಶ್​ ಜೋಡಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೈಸೂರಿನ ಲಾಡ್ಜ್​ ಒಂದರಲ್ಲಿ ಇಬ್ಬರನ್ನು ನರೇಶ್​ ಅವರ ಮೂರನೇ ಪತ್ನಿ ರಮ್ಯಾ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದು ಭಾರೀ ಸುದ್ದಿಯಾಗಿತ್ತು.

ನರೇಶ್​ ಮತ್ತು ಪವಿತ್ರ ಲೋಕೇಶ್​ ನಡುವೆ ಲವ್ವಿಡವ್ವಿ ಇದ್ದು, ಮೂರನೇ ಪತ್ನಿ ರಮ್ಯಾ ಸದ್ಯ ನರೇಶ್​ ವಿರುದ್ಧ ಬುಸುಗುಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ, ನರೇಶ್ ಯಾವ ರೀತಿಯ ವ್ಯಕ್ತಿ? ಮತ್ತು ನರೇಶ್​ಗೆ ಇರುವ ದುರಾಭ್ಯಸಗಳು ಎಂಥವು ಎಂಬುದನ್ನು ಬಯಲು ಮಾಡಿದ್ದಾರೆ.

ಕಾರು ಚಾಲಕನ ಜೊತೆಗೆ ರಮ್ಯಾ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ನರೇಶ್​ ಕತೆ ಕಟ್ಟಿದ್ದರಂತೆ. ಅಲ್ಲದೆ, ಸಿಕ್ಕ ಸಿಕ್ಕವರ ಜೊತೆ ರಮ್ಯಾ ಹೆಸರನ್ನು ತಳುಕು ಹಾಕುತ್ತಿದ್ದರಂತೆ. ಸದಾ ನನ್ನ ಮೇಲೆ ಆರೋಪ ಮಾಡುವುದೇ ನರೇಶ್​ ಕೆಲಸವಾಗಿತ್ತು. ನಾನು ಸಾಕಷ್ಟು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದಾನೆ. ಆ ಪ್ರಮಾಣದಲ್ಲಿ ನರೇಶ್​ ನನಗೆ ತೊಂದರೆ ಕೊಟ್ಟಿದ್ದಾರೆ ಎಂದು ರಮ್ಯಾ ಆರೋಪ ಮಾಡಿದ್ದಾರೆ.

ನರೇಶ್​ಗೆ ಹೆಚ್ಚು ಹೆಚ್ಚು ಪೋರ್ನ್​ ವಿಡಿಯೋಗಳನ್ನು ನೋಡುವ ಚಟ ಇದೆ. ಅಪ್ಪ ಸಾಕಷ್ಟು ಕೆಟ್ಟ ವಿಡಿಯೋಗಳನ್ನು ನೋಡುತ್ತಾರೆ ಎಂದು ಮಗ ರಣವೀರ್​ ಬಂದು ಹೇಳಿದಾಗಲೇ ನನಗೆ ಆ ಬಗ್ಗೆ ಗೊತ್ತಾಗಿದ್ದು, ಓರ್ವ ತಂದೆಯಾಗಿ ಎಷ್ಟು ಜವಾಬ್ದಾರಿ ಇರಬೇಕು? ಆದರೆ, ನರೇಶ್​ ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ಎಂದು ರಮ್ಯಾ ಬಹಿರಂಗಪಡಿಸಿದ್ದಾರೆ.

ಅಂದಹಾಗೆ ತೆಲುಗು ಚಿತ್ರರಂಗದಲ್ಲಿ ಪೋಷಕ ನಟ ನರೇಶ್​ ಹಾಗೂ ಕನ್ನಡ, ತೆಲುಗು ಚಿತ್ರಗಳಲ್ಲಿ ಪೋಷಕ ನಟಿ ಪವಿತ್ರಾ ಲೋಕೇಶ್​ ನಡುವೆ ಸಂಬಂಧ ಇರುವುದಾಗಿ ನರೇಶ್​ ಪತ್ನಿ ರಮ್ಯಾ, ಮಾಧ್ಯಮಗಳ ಮುಂದೆ ಹೇಳಿದ್ದರು. ಇದಲ್ಲದೇ ತಮಗೆ ಪತಿಯಿಂದ ಅನ್ಯಾಯವಾಗಿದ್ದು, ನ್ಯಾಯಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿಚಾರಕ್ಕೆ ಪುಷ್ಟಿ ಕೊಡುವಂತೆ ನರೇಶ್​ ಹಾಗೂ ಪವಿತ್ರಾ ಹೋಟೆಲ್​ನಲ್ಲಿ ಒಂದೇ ರೂಮಿನಲ್ಲಿ ನೆಲೆಸಿದ್ದರು. ಇಷ್ಟೆಲ್ಲಾ ನಡೆದ ಮೇಲೂ ಪವಿತ್ರಾ ಲೋಕೇಶ್​ ಮಾತ್ರ ತಮ್ಮ ಹಾಗೂ ನರೇಶ್​ ನಡುವಿನ ಸಂಬಂಧದ ಬಗ್ಗೆ ಯಾವುದೇ ಮಾಹಿತಿ ಬಿಚ್ಚಿಟ್ಟಿರಲಿಲ್ಲ. ನರೇಶ್​ ಕೇವಲ ತನಗೆ ಒಬ್ಬ ಒಳ್ಳೆಯ ಗೆಳೆಯ ಎಂದೇ ವಾದಿಸಿದ್ದರು.

ಆದರೆ ಇದೀಗ ನರೇಶ್​ 2023ರ ಹೊಸ ವರ್ಷಕ್ಕೆ ಹೊಸ ಸುದ್ದಿ ಎಂಬಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ನರೇಶ್​ ಕ್ಯಾಂಡಲ್​ ಲೈಟ್​ನಲ್ಲಿ ಪವಿತ್ರಾ ಲೋಕೇಶ್​ ಅವರೊಂದಿಗೆ ಕೇಕ್​ ಕತ್ತರಿಸಿ, ಪರಸ್ಪರ ತಿನ್ನಿಸಿದ್ದಾರೆ. ನಂತರ ಇಬ್ಬರೂ ಒಬ್ಬರಿಗೊಬ್ಬರು ಪರಸ್ಪರ ಚುಂಬಿಸಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಶಯ ಕೋರುತ್ತಾ, ಈ ಹೊಸ ವರ್ಷಕ್ಕೆ ನಿಮ್ಮೆಲ್ಲರ ಹಾರೈಕೆ ಬೇಕು. ಸದ್ಯದಲ್ಲೇ ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್​ರೊಂದಿಗಿನ ಸಂಬಂಧಕ್ಕೆ ಮುದ್ರೆ ಒತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net